ದೀಪಾವಳಿ ಹಬ್ಬಕ್ಕೆ ಪಟಾಕಿ ಸಿಡಿಸುವ ನಿರೀಕ್ಷೆಯಲ್ಲಿದ್ದವರಿಗೆ ಮುಖ್ಯವಾದ ಮಾಹಿತಿ ಇಲ್ಲಿದೆ. ಹಸಿರು ಪಟಾಕಿಗಳ ಮಾರಾಟಕ್ಕೆ ಮಾತ್ರ ಅವಕಾಶ ನೀಡಲಾಗಿದ್ದು, ಕಚ್ಚಾ ಪದಾರ್ಥಗಳ ಬೆಲೆ ಏರಿಕೆಯಿಂದ ಹಸಿರು ಪಟಾಕಿ ಬೆಲೆ ಶೇಕಡ 30 ರಷ್ಟು ಏರಿಕೆಯಾಗಿದೆ.
ತಮಿಳುನಾಡಿನ ಶಿವಕಾಶಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಪಟಾಕಿ ತಯಾರಿಸಲಾಗುತ್ತದೆ. ರಾಜ್ಯದ ವಿವಿಧ ಕಡೆಗಳಿಗೆ ಡೀಲರ್ ಗಳ ಮೂಲಕ ಹಂಚಿಕೆಯಾಗುತ್ತದೆ. ಸಾಗಾಣಿಕೆ ವೆಚ್ಚ ಮತ್ತು ಕಚ್ಚಾ ಪದಾರ್ಥಗಳ ಬೆಲೆ ಏರಿಕೆಯಿಂದಾಗಿ ಹಸಿರು ಪಟಾಕಿಗಳು ದುಬಾರಿಯಾಗಿವೆ. ಶೇಕಡ 30 ರಷ್ಟು ಹಸಿರು ಪಟಾಕಿ ಬೆಲೆ ಏರಿಕೆಯಾಗಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಬಲು ದುಬಾರಿಯಾಗಿದೆ.
ಸಾಮಾನ್ಯ ಪಟಾಕಿಯ ಕುಂಡದ ಬಾಕ್ಸ್ ಗೆ 100 -200 ರೂಪಾಯಿ ದರ ಇದ್ದರೆ, ಹಸಿರು ಪಟಾಕಿಗೆ 500 -550 ರೂ. ಆಗುತ್ತದೆ. ಹೀಗೆ ಆಟಂಬಾಂಬ್, ಭೂಚಕ್ರ ಸೇರಿ ಅನೇಕ ಮಾದರಿಯ ಹಸಿರು ಪಟಾಕಿ ದರ ದುಬಾರಿಯಾಗಿದೆ. ಮೊದಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಕಂಗಾಲಾಗಿರುವ ಜನತೆ ದೀಪಾವಳಿ ಹಬ್ಬ ಮಾಡಲು ಹಿಂದೆ ಮುಂದೆ ನೋಡುತ್ತಿದ್ದು, ದೀಪಾವಳಿ ಹಬ್ಬದಲ್ಲಿ ಅಗತ್ಯವಾಗಿದ್ದ ಪಟಾಕಿಗಳ ಬೆಲೆ ದುಬಾರಿಯಾಗಿರುವುದು ನುಂಗಲಾರದ ತುತ್ತಾಗಿದೆ.