ಈ ಬಾರಿಯ ದೀಪಾವಳಿಯನ್ನು ಹಸಿರು ಪಟಾಕಿಗಳನ್ನು ಸುಡುವುದರ ಮೂಲಕ ಆಚರಿಸುವಂತೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಮನವಿ ಮಾಡಿದೆ.
ಪಟಾಕಿಗಳು ಶಬ್ಧ ಮಾಲಿನ್ಯ ಹಾಗೂ ವಾಯುಮಾಲಿನ್ಯ ಉಂಟುಮಾಡಿ ಪರಿಸರವನ್ನು ಹಾಳು ಮಾಡುತ್ತವೆ. ಜನರ ಆರೋಗ್ಯದ ಮೇಲೆ ಪರಿಣಾಮ ಬೀರುವುದರಿಂದ ದೀಪಾವಳಿ ಹಬ್ಬದ ಸಂದರ್ಭದಲ್ಲಿ 125 dB ಕ್ಕಿಂತ ಹೆಚ್ಚಿನ ಶಬ್ಧ ಉಂಟು ಮಾಡುವ ಪಟಾಕಿಗಳನ್ನು ನಿಷೇಧಿಸಿದ್ದು, ಹಸಿರು ಪಟಾಕಿಗಳನ್ನು ಬಿಟ್ಟು ಉಳಿದ ಯಾವುದೇ ಪಟಾಕಿಗಳನ್ನು ಮಾರಾಟ ಮಾಡುವಂತಿಲ್ಲ ಮತ್ತು ಹಚ್ಚುವಂತಿಲ್ಲ ಎಂದು ರಾಜ್ಯ ಸರ್ಕಾರ ಆದೇಶಿಸಿದೆ.
ಪರಿಸರ, ಪ್ರಾಣಿ, ಪಕ್ಷಿ ಹಾಗೂ ಜನತೆಯ ಹಿತದೃಷ್ಠಿಯಿಂದ ಮತ್ತು ಕೋವಿಡ್-19ರ ಸೋಂಕು ಪ್ರಸರಣೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ದೀಪಾವಳಿ ಹಬ್ಬವನ್ನು ಸರಳ ಹಾಗೂ ಭಕ್ತಿ ಪೂರಕವಾಗಿ ದೀಪ ಬೆಳಗುವುದರ ಮೂಲಕ ಪರಿಸರ ಸ್ನೇಹಿ ದೀಪಾವಳಿಯನ್ನಾಗಿ ಅಚರಿಸುವಂತೆ ಮಂಡಳಿಯ ಪರಿಸರ ಅಧಿಕಾರಿಗಳು ತಿಳಿಸಿರುತ್ತಾರೆ.