ನವದೆಹಲಿ: ನಿಯಮ ಮೀರಿ ಪಟಾಕಿ ಸಿಡಿಸಿದ ಹಿನ್ನೆಲೆಯಲ್ಲಿ 12 ಮಂದಿಯನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. 10 ಪ್ರಕರಣ ದಾಖಲಿಸಿಕೊಂಡಿದ್ದಾರೆ.
ದೆಹಲಿ ಸರ್ಕಾರ ಪಟಾಕಿ ಸಿಡಿಸಲು ನಿರ್ಬಂಧ ಹೇರಿದೆ. ಕೊರೋನಾ ಸಂದರ್ಭದಲ್ಲಿ ಸೋಂಕಿತರಿಗೆ ಉಸಿರಾಟದ ಸಮಸ್ಯೆ ಎದುರಾಗುತ್ತದೆ. ಮತ್ತು ಮಾಲಿನ್ಯ ಹೆಚ್ಚಾಗುತ್ತದೆ ಎನ್ನುವ ಕಾರಣಕ್ಕೆ ದೆಹಲಿ ಸರ್ಕಾರ ಪಟಾಕಿ ಸಿಡಿಸುವುದರ ಮೇಲೆ ನಿಷೇಧ ಹೇರಿದೆ.
ಇದೇ ಸಂದರ್ಭದಲ್ಲಿ ನಿಯಮ ಮೀರಿ ಪಟಾಕಿ ಸಿಡಿಸಲಾಗಿದೆ. 10 ಪ್ರಕರಣಗಳು ದಾಖಲಿಸಿಕೊಂಡು 12 ಮಂದಿಯನ್ನು ಪೊಲೀಸರು ಬಂಧಿಸಿದ್ದು, 1769 ಕೆಜಿ ಸುಡುಮದ್ದು ವಶಪಡಿಸಿಕೊಂಡಿದ್ದಾರೆ.