ಜನಪ್ರಿಯ ಯೂಟ್ಯೂಬರ್ ಮಾರ್ಕ್ ರಾಬರ್, ತನ್ನ ಗ್ಯಾಜೆಟ್‌ಗಳು ಮತ್ತು ಮೋಜಿನ ವಿಜ್ಞಾನ ವಿಡಿಯೋಗಳಿಗೆ ಹೆಸರುವಾಸಿಯಾಗಿದ್ದಾರೆ, ಈಗ ಇವರು ಮತ್ತೊಂದು ಪ್ರಯೋಗವನ್ನು ಮಾಡಿದ್ದಾರೆ. ಅವರು ಮಾಡಿರುವ ಸಾಹಸ ಎಂದರೆ ವಿಕ್ಟರ್ ಕಣಿವೆಯಲ್ಲಿ ಒಂದೆರಡು ಮೊಟ್ಟೆಗಳನ್ನು ಬಾಹ್ಯಾಕಾಶದಿಂದ ಬೀಳಿಸಿರುವುದು!
ಇದನ್ನು ಅವರು ಮಾಡಿದ್ದು ಈ ವರ್ಷದ ಆರಂಭದಲ್ಲಿ. ಆದರೆ ಇದೀಗ ಅದನ್ನು ಯೂಟ್ಯೂಬ್ನಲ್ಲಿ ಅಪ್‌ಲೋಡ್ ಮಾಡಲಾಗಿದೆ. “ಎಗ್ ಡ್ರಾಪ್ ಫ್ರಮ್ ಸ್ಪೇಸ್” ಎಂಬ ಶೀರ್ಷಿಕೆಯನ್ನು ಅವರು ಕೊಟ್ಟಿದ್ದಾರೆ. ಬೃಹದಾಕಾರದ ಬಲೂನಿನಲ್ಲಿ ಮೊಟ್ಟೆಗಳನ್ನಿಟ್ಟು ಅದನ್ನು ಬಾಹ್ಯಾಕಾಶಕ್ಕೆ ಉಡಾವಣೆ ಮಾಡಿ ನಂತರ ಅದನ್ನು ಕೆಳಕ್ಕೆ ಬೀಳಿಸಿರುವ ಕುತೂಹಲದ ವಿಡಿಯೋ ಇದಾಗಿದೆ.
ವಿಡಿಯೋದಲ್ಲಿ ಮಾರ್ಕ್ ರಾಬರ್ ತಂಡವು ಬೇರ್ ವ್ಯಾಲಿ ರಸ್ತೆಯಲ್ಲಿ ಆಪಲ್ ವ್ಯಾಲಿಯ ಡೆಡ್‌ಮ್ಯಾನ್ಸ್ ಪಾಯಿಂಟ್‌ಗೆ ಚಾಲನೆ ನೀಡುತ್ತಿರುವುದನ್ನು ಕಾಣಬಹುದು. ಅಪ್‌ಲೋಡ್ ಮಾಡಿದ ನಂತರ ವಿಡಿಯೋ 9.9 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದೆ. ಇವರ ಈ ಅದ್ಭುತ ಪ್ರಯತ್ನಕ್ಕೆ ನೆಟ್ಟಿಗರು ತಲೆಬಾಗಿದ್ದಾರೆ.