
ಹುತಾತ್ಮ ಯೋಧರೊಬ್ಬರ ಸಹೋದರಿಯ ಮದುವೆಗೆ ಆಕೆಯ ಅಣ್ಣನ ಸ್ಥಾನದಲ್ಲಿ ನಿಲ್ಲಲು ಆಗಮಿಸಿದ್ದ ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಜವಾನರು ಎಲ್ಲರ ಹೃದಯ ಗೆದ್ದಿದ್ದಾರೆ.
ಸಿಆರ್‌ಪಿಎಫ್‌ನ 110ನೇ ಬೆಟಾಲಿಯನ್‌ನಲ್ಲಿ ಕೆಲಸ ಮಾಡುತ್ತಿದ್ದ ಪೇದೆ ಶೈಲೇಂದ್ರ ಪ್ರತಾಪ್ ಸಿಂಗ್ ಕಳೆದ ವರ್ಷ ಪುಲ್ವಾಮಾದಲ್ಲಿ ಘಟಿಸಿದ್ದ ಭಯೋತ್ಪಾದಕ ದಾಳಿಯಲ್ಲಿ ಮೃತಪಟ್ಟಿದ್ದರು.
ಯಮಯಾತನೆ ನೀಡುವ ಮೂತ್ರಪಿಂಡದ ಕಲ್ಲಿಗೆ ಇಲ್ಲಿದೆ ಮನೆ ಮದ್ದು
ಉತ್ತರ ಪ್ರದೇಶದ ರಾಯ್ ಬರೇಯ್ಲಿಯಲ್ಲಿ ಹಮ್ಮಿಕೊಂಡಿದ್ದ ಶೈಲೇಂದ್ರರ ಸಹೋದರಿಯ ಮದುವೆಗೆ ಅವರ ಸಹೋದ್ಯೋಗಿಗಳು ಆಗಮಿಸಿ, ಅಗಲಿದ ಅಣ್ಣನ ಸ್ಥಾನ ಭರಿಸಿದ್ದಾರೆ. ಅಣ್ಣ ಮಾಡಬೇಕಿದ್ದ ಶಾಸ್ತ್ರಗಳನ್ನೂ ಸಹ ಈ ಯೋಧರು ಖುದ್ದಾಗಿ ಮಾಡಿದ್ದಾರೆ.
ಸಿಆರ್‌ಪಿಎಫ್ ಟ್ವಿಟರ್‌ನಲ್ಲಿರುವ ತನ್ನ ಹ್ಯಾಂಡಲ್‌ನಲ್ಲಿ ಈ ಚಿತ್ರವನ್ನು ಶೇರ್ ಮಾಡಿಕೊಂಡಿದೆ. ತಮ್ಮ ಮಾನಸ ಸಹೋದರಿಯನ್ನು ಮದುವೆ ಮಂಟಪದತ್ತ ಕೊಂಡೊಯುತ್ತಿರುವ ಯೋಧರ ಚಿತ್ರ ನೆಟ್ಟಿಗರ ಹೃದಯದಲ್ಲಿ ವಿಶೇಷ ಸ್ಥಾನ ಪಡೆದುಕೊಂಡಿದೆ.