
ರಾಮನಗರ: ಶಾಲಾ ಮಕ್ಕಳಿಗೆ ಇನ್ನುಮುಂದೆ ಶೈಕ್ಷಣಿಕ ಪ್ರವಾಸ ಕಡ್ಡಾಯಗೊಳಿಸಲಾಗಿದೆ ಎಂದು ಪ್ರವಾಸೋದ್ಯಮ ಸಚಿವ ಸಿ.ಪಿ. ಯೋಗೇಶ್ವರ್ ಹೇಳಿದ್ದಾರೆ.
ರಾಮನಗರದಲ್ಲಿ ಮಾತನಾಡಿದ ಸಚಿವ ಯೋಗೇಶ್ವರ್, ಶಾಲಾ ಮಕ್ಕಳ ಶೈಕ್ಷಣಿಕ ಪ್ರವಾಸವನ್ನು ಕಡ್ಡಾಯಗೊಳಿಸುವ ಜೊತೆಗೆ ಎರಡು ಮೂರು ದಿನಗಳ ಕಾಲ ತಂಗಲು ಕನಿಷ್ಠ ಎರಡು ಸಾವಿರ ಮಂದಿಗೆ ಪ್ರವಾಸಿತಾಣಗಳಲ್ಲಿ ಲಾಡ್ಜಿಂಗ್ ವ್ಯವಸ್ಥೆಯನ್ನು ಕಲ್ಪಿಸಲಾಗುವುದು ಎಂದು ಹೇಳಿದ್ದಾರೆ.
ಶಾಲಾ ಮಕ್ಕಳ ಶೈಕ್ಷಣಿಕ ಪ್ರವಾಸ ಒಂದು ದಿನಕ್ಕೆ ಸೀಮಿತಗೊಂಡಿದ್ದು, ಐತಿಹಾಸಿಕ ತಾಣಗಳನ್ನು ಮಕ್ಕಳು ನೋಡಿಲ್ಲ. ಉತ್ತರ ಕರ್ನಾಟಕದವರು ದಕ್ಷಿಣ ಕರ್ನಾಟಕದ ಪ್ರವಾಸಿ ತಾಣಗಳನ್ನು ನೋಡಿಲ್ಲ. ದಕ್ಷಿಣ ಕರ್ನಾಟಕದವರು ಉತ್ತರದ ಪ್ರವಾಸಿ ತಾಣಗಳನ್ನು ನೋಡಿಲ್ಲ. ಹೀಗಾಗಿ ಶಾಲಾ ಮಕ್ಕಳಿಗೆ ಪ್ರವಾಸವನ್ನು ಕಡ್ಡಾಯಗೊಳಿಸಲಾಗುವುದು. ಅವರಿಗೆ ವಸತಿ ಸೇರಿದಂತೆ ಎಲ್ಲಾ ಸೌಲಭ್ಯಗಳನ್ನು ಕಲ್ಪಿಸಲಾಗುವುದು ಎಂದು ಸಚಿವರು ಮಾಹಿತಿ ನೀಡಿದ್ದಾರೆ.