ಮೈಸೂರು: ಸರ್ಕಾರದಲ್ಲಿ ನನಗೆ ಈಗಲೂ ಅಸಮಾಧಾನ ಇದೆ ಎಂದು ಮೈಸೂರಿನಲ್ಲಿ ಪ್ರವಾಸೋದ್ಯಮ ಸಚಿವ ಸಿ.ಪಿ. ಯೋಗೇಶ್ವರ್ ಹೇಳಿದ್ದಾರೆ.
ಇದು ನನ್ನ ಸರ್ಕಾರ ಅನ್ನುವ ಭಾವನೆ ನನಗೆ ಬರುತ್ತಿಲ್ಲ. ನನಗೆ ಆಗುತ್ತಿರುವ ನೋವು, ಚಿತ್ರಹಿಂಸೆಯನ್ನು ಹೇಳುತ್ತಿದ್ದೇನೆ. ಅದರಲ್ಲಿ ಎಲ್ಲವನ್ನೂ ಹೇಳಲು ಸಾಧ್ಯವಿಲ್ಲ. ನಮ್ಮ ಸರ್ಕಾರವಿದ್ದರೂ, ವಿರೋಧಪಕ್ಷದವರ ಕೈ ಮೇಲಾಗುತ್ತಿದೆ. ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಮೀಸಲಾತಿ ಕೂಡ ಹೆಚ್.ಡಿ. ಕುಮಾರಸ್ವಾಮಿ ಹೇಳಿದಂತೆಯೇ ಆಗುತ್ತಿದೆ. ಸಾಕಷ್ಟು ಬಾರಿ ಹಿಂಸೆಯಾಗಿದೆ ಎಂದು ದೂರಿದ್ದಾರೆ.
ಜಿಪಂ, ತಾಪಂ ಮೀಸಲಾತಿ ಕುಮಾರಸ್ವಾಮಿ ಹೇಳಿದಂತೆ ಆಗಿದ್ದು, ಅವರ ಅನುಕೂಲಕ್ಕೆ ತಕ್ಕಂತೆ ಜಿಪಂ ತಾಪಂ ಮೀಸಲಾತಿ ಮಾಡಿದರೆ ನಾವು ಹೇಗೆ ಸ್ಪರ್ಧೆ ಮಾಡುವುದು ಎಂದು ಪ್ರಶ್ನಿಸಿದ್ದಾರೆ. ಈ ಸರ್ಕಾರದಲ್ಲಿ ಸಾಮಾಜಿಕ ನ್ಯಾಯ ಕೊಡಿಸಲು ಆಗುತ್ತಿಲ್ಲ. ರಾಜ್ಯದ ಜನತೆಗೆ ಸಾಮಾಜಿಕ ನ್ಯಾಯ ಕೊಡಿಸಲು ಆಗುತ್ತಿಲ್ಲ. ಡಿ.ಕೆ. ಶಿವಕುಮಾರ್, ಹೆಚ್.ಡಿ. ಕುಮಾರಸ್ವಾಮಿಯೊಂದಿಗೆ ಮುಖ್ಯಮಂತ್ರಿ ಹೊಂದಾಣಿಕೆ ಸದಾ ಇದೆ. ರಾಜ್ಯದಲ್ಲಿ ವಿರೋಧಪಕ್ಷಗಳು ಇಲ್ಲವೆಂದು ಎಂದು ಸಿ.ಪಿ. ಯೋಗೇಶ್ವರ್ ಹೇಳಿದ್ದಾರೆ.