ಕೊರೊನಾ ವಿರುದ್ಧದ ಹೋರಾಟದಲ್ಲಿ ಲಸಿಕೆ ದೊಡ್ಡ ಅಸ್ತ್ರವಾಗಿದೆ. ಅನೇಕ ದೇಶಗಳಲ್ಲಿ ಲಸಿಕೆ ಪಡೆಯದ ಜನರ ಪ್ರವೇಶವನ್ನು ನಿಷೇಧಿಸಲಾಗಿದೆ. ಲಸಿಕೆ ಪ್ರಮಾಣ ಪತ್ರ ತೋರಿಸುವುದು ಕಡ್ಡಾಯ. ಅಂತಾರಾಷ್ಟ್ರೀಯ ಪ್ರಯಾಣಕ್ಕಾಗಿ ಕೋವಿನ್ ಪೋರ್ಟಲ್ ಪ್ರತ್ಯೇಕ ಪ್ರಮಾಣಪತ್ರ ನೀಡಲು ಮುಂದಾಗಿದೆ.
ವಿಶ್ವ ಆರೋಗ್ಯ ಸಂಸ್ಥೆಯ ಮಾರ್ಗಸೂಚಿಗಳ ಪ್ರಕಾರ ನೀಡಲಾದ ಹೊಸ ಪ್ರಮಾಣಪತ್ರವನ್ನು ಪ್ರಯಾಣಿಕರು ಕೋವಿನ್ ಪೋರ್ಟಲ್ ನಿಂದ ಡೌನ್‌ಲೋಡ್ ಮಾಡಬಹುದು. ಅಂತರರಾಷ್ಟ್ರೀಯ ಪ್ರಯಾಣಕ್ಕಾಗಿ ವ್ಯಾಕ್ಸಿನೇಷನ್ ಪ್ರಮಾಣಪತ್ರವನ್ನು ವರ್ಷ-ತಿಂಗಳು-ದಿನದ ರೂಪದಲ್ಲಿ ಬರೆಯಲಾಗುವುದು. ಈ ಪ್ರಮಾಣಪತ್ರವು ವಿಶಿಷ್ಟವಾದ ಐಡಿಯನ್ನು ಹೊಂದಿರುತ್ತದೆ.
ಲಸಿಕೆಯ ಹೆಸರಿನೊಂದಿಗೆ ಲಸಿಕೆಯ ಪ್ರಕಾರವನ್ನು ಸಹ ಪ್ರಮಾಣಪತ್ರದಲ್ಲಿ ಬರೆಯಲಾಗುತ್ತದೆ. ಉದಾಹರಣೆಗೆ, ಕೋವಾಕ್ಸಿನ್- ನಿಷ್ಕ್ರಿಯಗೊಳಿಸಿದ ವೈರಸ್ ಲಸಿಕೆ, ಕೋವಿಶೀಲ್ಡ್- ಮರುಸಂಯೋಜಕ ಅಡೆನೊವೈರಸ್ ವೆಕ್ಟರ್ ಲಸಿಕೆ. ಹೀಗೆ ಪ್ರಮಾಣಪತ್ರದಲ್ಲಿ ವಿವರ ಬರೆಯಲಾಗುತ್ತದೆ.
ಪ್ರಮಾಣಪತ್ರವನ್ನು ಡೌನ್ಲೋಡ್ ಮಾಡುವ ಪ್ರಕ್ರಿಯೆಯು ಸರಳವಾಗಿದೆ. ಮೊದಲು Cowin.gov.in ವೆಬ್‌ಸೈಟ್‌ಗೆ ಹೋಗಬೇಕು. ನೋಂದಾಯಿತ ಮೊಬೈಲ್ ಸಂಖ್ಯೆಯೊಂದಿಗೆ ಲಾಗಿನ್ ಆಗಬೇಕು. ಪಾಸ್‌ಪೋರ್ಟ್‌ನಲ್ಲಿ ಬರೆದಿರುವ ಪಾಸ್‌ಪೋರ್ಟ್ ಸಂಖ್ಯೆ ಮತ್ತು ಪ್ರಮಾಣ ಪತ್ರ ಪಡೆದ ವಿವರವನ್ನು ವರ್ಷ-ತಿಂಗಳು-ದಿನದ ರೂಪದಲ್ಲಿ ನಮೂದಿಸಬೇಕು.
ನಂತ್ರ ಪುಟವನ್ನು ರಿಫ್ರೆಶ್ ಮಾಡಬೇಕು. ನಂತ್ರ ನೀವು ಪ್ರಮಾಣ ಪತ್ರವನ್ನು ಡೌನ್ಲೋಡ್ ಮಾಡಬೇಕು. ಅದನ್ನು ದಾಖಲೆ ರೂಪದಲ್ಲಿ ತೋರಿಸಬೇಕಾಗುತ್ತದೆ.