ಕೊರೊನಾ ಲಸಿಕೆಯ ಎರಡು ಡೋಸ್ಗಳನ್ನ ಪಡೆದ ಬಳಿಕ ಪ್ರಮಾಣ ಪತ್ರ ಪಡೆಯುವಲ್ಲಿ ಸಂಕಷ್ಟ ಎದುರಿಸುತ್ತಿರೋರಿಗೆಂದೇ ಕೋವಿನ್ ಅಪ್ಲಿಕೇಶನ್ನಲ್ಲಿ ಹೊಸ ಸೌಲಭ್ಯವೊಂದನ್ನ ಪರಿಚಯಿಸಲಾಗಿದೆ.
ಕೊರೊನಾ ಮೊದಲ ಹಾಗೂ ಎರಡನೆ ಡೋಸ್ ಪಡೆಯುವ ವೇಳೆ ಅನೇಕರು ಬೇರೆ ಬೇರೆ ಫೋನ್ ನಂಬರ್ ನೀಡಿದ ಕಾರಣ ಪ್ರಮಾಣ ಪತ್ರ ಸಿಗುತ್ತಿಲ್ಲ.
ಮಹಾರಾಷ್ಟ್ರ ಒಂದರಲ್ಲೇ ಈ ರೀತಿಯ 1 ಲಕ್ಷಕ್ಕೂ ಅಧಿಕ ಮಂದಿಗೆ ಈ ಸಮಸ್ಯೆ ಎದುರಾಗಿದೆ. ಬೇರೆ ಬೇರೆ ಫೋನ್ ನಂಬರ್ ನೀಡಿದ ಕಾರಣ ಎರಡೂ ಡೋಸ್ಗಳನ್ನ ಪಡೆದ ಬಳಿಕವೂ ಲಸಿಕೆ ಪೂರ್ಣಗೊಂಡಿಲ್ಲ ಎಂದು ತೋರಿಸುತ್ತಿದೆ.
ಆದರೆ ಇನ್ಮುಂದೆ ಈ ರೀತಿ ಸಮಸ್ಯೆ ಕಾಣಸಿಗೋದಿಲ್ಲ. ಇದಕ್ಕಾಗಿ ನೀವು ಕೋವಿನ್ ಅಪ್ಲಿಕೇಶನ್ನಲ್ಲಿ raise an issue ಎಂಬ ಆಯ್ಕೆ ಮೇಡಿ ಕ್ಲಿಕ್ ಮಾಡಿ ಬಳಿಕ merge multiple first dose provisional certificates ಆಯ್ಕೆಯನ್ನ ಒತ್ತಿರಿ .
ಕೋವಿನ್ ಅಪ್ಲಿಕೇಶನ್ ಮೂಲಕ ಜನರು ಅತ್ಯಂತ ಸುಲಭವಾಗಿ ಲಸಿಕೆ ನೋಂದಣಿ ಪ್ರಕ್ರಿಯೆಯನ್ನ ಮಾಡಬಹುದಾಗಿದೆ. ಆದರೆ ಅನೇಕರಿಗೆ ವಿವಿಧ ಕಾರಣಗಳಿಂದ ಸೆಕೆಂಡ್ ಡೋಸ್ ಪಡೆದ ಬಳಿಕವೂ ಪ್ರಮಾಣ ಪತ್ರ ಸಿಗುತ್ತಿಲ್ಲ. ಇನ್ಮುಂದೆ ಈ ಸಮಸ್ಯೆಗಳಿಗೆ ಅಪ್ಲಿಕೇಶನ್ನಲ್ಲಿಯೇ ಪರಿಹಾರ ಸಿಗಲಿದೆ ಎಂದು ಆರ್.ಎಸ್. ಶರ್ಮಾ ಹೇಳಿದ್ದಾರೆ.