
ಉಡುಪಿ: ಕುಂದಾಪುರ ತಾಲೂಕಿನ ಕೆಂಚನೂರು ಗ್ರಾಮದ ಅಂಡಾರುಕಟ್ಟೆ ಸಮೀಪ ಸುಂಟರಗಾಳಿ, ಮಳೆಯಿಂದಾಗಿ ಮರ ಬಿದ್ದು ಮಹಿಳೆ ಮತ್ತು ಹಸು ಮೃತಪಟ್ಟ ಘಟನೆ ನಡೆದಿದೆ.
ಮನೆ ಸಮೀಪ ಕಟ್ಟಿರುವ ಹಸುಗಳನ್ನು ಬಿಡಿಸಿಕೊಂಡು ಬರಲು ತೆರಳಿದ್ದ ಸುಜಾತಾ ಆಚಾರ್ಯ(48) ಹಾಗೂ ಹಸು ಮೇಲೆ ಮರ ಬಿದ್ದು ಸಾವನ್ನಪ್ಪಿದ್ದಾರೆ. ಭಾನುವಾರ ಸಂಜೆ ಭಾರಿ ಗಾಳಿ ಸಹಿತ ಮಳೆಯಾಗಿ ಮರ ಬಿದ್ದು ದುರ್ಘಟನೆ ಸಂಭವಿಸಿದೆ. ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.