ಬೆಂಗಳೂರು: ಭಾರತ ಕೃಷಿ ಪ್ರಧಾನ ದೇಶವಾಗಿದ್ದು, ಪಶು ವೈದ್ಯಕೀಯ ಸೇವೆಯನ್ನು ಉಚಿತವಾಗಿ ನೀಡಲಾಗುತ್ತಿದೆ. ಇದೀಗ ಇಂತಹ ಸೇವೆಗೆ ಸರ್ಕಾರ ದರ ನಿಗದಿಪಡಿಸಲು ಮುಂದಾಗಿದೆ. ಎಲ್ಲ ರೀತಿಯ ಪ್ರಾಣಿಗಳಿಗೆ ಕನಿಷ್ಠ ಚಿಕಿತ್ಸಾ ದರವನ್ನು ನಿಗದಿಪಡಿಸಲು ಸರ್ಕಾರ ಮುಂದಾಗಿದ್ದು, ಇದಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ ಎನ್ನಲಾಗಿದೆ.
ಗ್ರಾಮೀಣ ಭಾಗದಲ್ಲಿ ಕೃಷಿ ಮತ್ತು ಹೈನುಗಾರಿಕೆಯನ್ನು ರೈತರು ಅವಲಂಬಿಸಿದ್ದಾರೆ. ಜಾನುವಾರುಗಳಿಗೆ ಆರೋಗ್ಯ ರಕ್ಷಣೆಯನ್ನು ಸರ್ಕಾದ ನೀಡುತ್ತಿದೆ. ಪಶುವೈದ್ಯ ಇಲಾಖೆಯ ಮೂಲಕ ಜಾನುವಾರುಗಳ ರಕ್ಷಣೆ ಮಾಡಿಕೊಂಡು ಬರಲಾಗುತ್ತಿದೆ. ಆದರೆ, ಈಗ ಜಾನುವಾರುಗಳ ಚಿಕಿತ್ಸೆಗೂ ದರ ನಿಗದಿ ಮಾಡಲು ಸರ್ಕಾರ ಚಿಂತನೆ ನಡೆಸಿದೆ. ಇದರಿಂದ ಸರ್ಕಾರಕ್ಕೆ ಆದಾಯ ನಿರೀಕ್ಷಿಸುವ ಚಿಂತನೆ ನಡೆಸಿದೆ ಎಂದು ಹೇಳಲಾಗಿದೆ.
ಹಸು, ಎಮ್ಮೆ, ದನ, ಕುರಿ, ಮೇಕೆ, ಹಂದಿ, ಕೋಳಿ, ಬಾತುಕೋಳಿ ಮೊಲ ಸೇರಿದಂತೆ ಪಕ್ಷಿ, ಪ್ರಾಣಿಗಳಿಗೆ ಪ್ರತ್ಯೇಕವಾಗಿ ಚಿಕಿತ್ಸೆ ದರ ನಿಗದಿಪಡಿಸಲು ಸರ್ಕಾರ ಮುಂದಾಗಿದೆ ಎಂದು ಹೇಳಲಾಗಿದೆ.