ಬೆಂಗಳೂರು: ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಯ ಎಲ್ಲಾ ದೇವಾಲಯಗಳಲ್ಲಿ ಅ. 26ರಂದು ಸಂಜೆ 5:30 ರಿಂದ 6:30ರ ವರೆಗೆ ಗೋಧೂಳಿ ಲಗ್ನದಲ್ಲಿ ಕಡ್ಡಾಯವಾಗಿ ಗೋಪೂಜೆ ನೆರವೇರಿಸುವಂತೆ ಧಾರ್ಮಿಕ ದತ್ತಿ ಇಲಾಖೆ ಸುತ್ತೋಲೆ ಹೊರಡಿಸಿದೆ.
ಸನಾತನ ಹಿಂದೂ ಸಂಸ್ಕೃತಿ ಆಗಿರುವ ಗೋಪೂಜೆಯನ್ನು ಪಟ್ಟಣ ಹಾಗೂ ನಗರಗಳಲ್ಲಿ ವಾಸಿಸುವವರು ಮರೆಯುತ್ತಿದ್ದಾರೆ. ಗೋಮಾತೆಯನ್ನು ದೇವತೆ ಎಂದು ಪೂಜಿಸುವ ಸಂಪ್ರದಾಯ ಬಿಡಬಾರದು. ವರ್ಷದಲ್ಲಿ ಒಂದು ದಿನವಾದರೂ ಗೋಪೂಜೆ ಮಾಡಬೇಕು. ಹೀಗಾಗಿ ಮುಜರಾಯಿ ದೇವಾಲಯಗಳಲ್ಲಿ ದೀಪಾವಳಿ ದಿನ ಗೋಪೂಜೆ ನೆರವೇರಿಸುವಂತೆ ಸುತ್ತೋಲೆ ಹೊರಡಿಸಲಾಗಿದೆ.