ಆಪ್ಟಿಕಲ್ ಇಲ್ಯೂಷನ್ ಕಣ್ಣಿಗಷ್ಟೇ ಅಲ್ಲದೇ ಬುದ್ಧಿಗೂ ದೊಡ್ಡ ಕೆಲಸ ಕೊಡುತ್ತದೆ. ಈ ಆಪ್ಟಿಕಲ್ ಭ್ರಮೆಗಳು ಮಾನವನ ಮನಸ್ಸನ್ನು ಸೆರೆಹಿಡಿಯುವ ಅತ್ಯಂತ ಆಕರ್ಷಕ ಚಟುವಟಿಕೆಗಳಲ್ಲಿ ಒಂದಾಗಿದೆ.
ಆದರೆ ಇವು ಕೆಲವೊಮ್ಮೆ
ವಾಸ್ತವದಲ್ಲಿ ಇರುವುದಕ್ಕಿಂತ ವಿಭಿನ್ನವಾಗಿ ಗ್ರಹಿಸುವಂತೆ ಮಾಡುತ್ತದೆ. ಇತರರು ಚಿತ್ರದಲ್ಲಿ ಇಲ್ಲದಿರುವ ವಿಷಯಗಳನ್ನು ನೋಡುವಂತೆ ಮಾಡುತ್ತದೆ.
ಅಂತಹ ಒಂದು ಟ್ರಿಕಿ ಆಪ್ಟಿಕಲ್ ಇಲ್ಯೂಷನ್ ಇಂಟರ್ನೆಟ್ ನಲ್ಲಿ ಬಿರುಗಾಳಿ ಎಬ್ಬಿಸಿದೆ.
ಕೆಂಪು ಬಣ್ಣದ ವೃತ್ತದೊಳಗೆ ದೃಷ್ಟಿ ಕೇಂದ್ರೀಕರಿಸುತ್ತಾ ಇದರಲ್ಲಿ ನಿಮಗೇನು ಕಾಣಿಸುತ್ತದೆ ತಿಳಿಸಿ ಎಂದು ಕೇಳಲಾಗಿದೆ.
ಈ ಚಿತ್ರವನ್ನು ಆಪ್ಟಿಕಲ್ ಇಲ್ಯೂಷನ್ಸ್ ಹೆಸರಿನ ಇನ್‌ಸ್ಟಾಗ್ರಾಮ್ ಪುಟವು “ಎಮೋಜಿಯೊಂದಿಗೆ ನೀವು ನೋಡುವುದನ್ನು ಕಾಮೆಂಟ್ ಮಾಡಿ!” ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದೆ.
ಇದನ್ನು ನೋಡಿದ ಹಲವರು ಹಸು, ನಾಯಿ, ಸಿಂಹ, ಕತ್ತೆ, ಕುದುರೆ ಕಾಣುತ್ತದೆ ಎಂದೆಲ್ಲಾ ಕಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ಏನೂ ಕಾಣುತ್ತಿಲ್ಲ ಎಂದಿದ್ದಾರೆ.
ಹಾಗಾದರೆ ಕೆಂಪು ವೃತ್ತದಲ್ಲಿ ಪ್ರಾಣಿಯನ್ನು ಗುರುತಿಸಲು ನಿಮಗೆ ಸಾಧ್ಯವಾಗುವುದೇ ?