ಹಸುವಿನಂತೆ ಕಂಡರೂ ಹಸುವಲ್ಲ, ಡಾಲ್ಫಿನ್ ರೀತಿಯಂತೆ ಭಾಸವಾದರೂ ಡಾಲ್ಫಿನ್ ಕೂಡ ಅಲ್ಲ….. ಇಂಥಹ ವಿಚಿತ್ರ ಜೀವಿಯೊಂದು ಸಮುದ್ರ ದಡದಲ್ಲಿ ಪತ್ತೆಯಾಗಿದೆ.
ಸಾಗರ-ಸಮುದ್ರಗಳೆಂದರೆ ಒಂದು ವಿಸ್ಮಯಗಳ ಆಗರ. ಸಮುದ್ರದ ಆಳದಲ್ಲಿ ಕಂಡು ಕೇಳರಿಯದಂತಹ ವೈಶಿಷ್ಟ್ಯಪೂರ್ಣವಾದ ಅದ್ಭುತ ಲೋಕವೇ ಇರುತ್ತದೆ. ವಿಸ್ಮಯಕಾರಿ ಜೀವಿಗಳು, ಗಿಡಗಳು, ಬೆಳಕು ಚಲ್ಲುವ ಕಲ್ಲುಗಳು ಹೀಗೆ ಮಾಯಾಲೋಕವೇ ಅನಾವರಣಗೊಂಡಿರುತ್ತವೆ… ಇಂಥಹ ವಿಸ್ಮಯಗಳಲ್ಲೊಂದು ಎಂಬಂತೆ ಸದ್ಯ ಸಮುದ್ರದ ದಡದಲ್ಲಿ ಪತ್ತೆಯಾದ ವಿಚಿತ್ರವಾದ ಬೃಹತ್ ಜೀವಿಯೊಂದು ಎಲ್ಲರಲ್ಲಿಯೂ ದಿಗ್ಭ್ರಮೆಯನ್ನುಟುಮಾಡಿದೆ.
ನೋಡಲು ಥೇಟ್ ಹಸುವಿನಂತೆ ಕಂಡುಬರುತ್ತದೆ. ಆದರೆ ಕಾಲುಗಳ ಬದಲಾಗಿ ಡಾಲ್ಫಿನ್ ನಂತೆ ಈಜುರಕ್ಕೆಗಳನ್ನು ಹೊಂದಿದೆ. ಈ ವಿಸ್ಮಯಕಾರಿ ಪ್ರಾಣಿಯನ್ನು ನೋಡಲು ಜನಸಾಗರವೇ ಹರಿದು ಬಂದಿದೆ. ಜನರ ಗುಂಪುಕಂಡು ಗಾಬರಿಯಾದ ಪ್ರಾಣಿ ಏಳಲು ಪ್ರಯತ್ನಿಸಿದೆಯಾದರೂ ಸಾಧ್ಯವಾಗದೇ ಪರದಾಡಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಎಲರನ್ನು ಚಕಿತಗೊಳಿಸುವಂತಿದೆ. ಸಾಗರದಾಳದಲ್ಲಿ ಕೌ ಡಾಲ್ಫಿನ್ ಗಳು ಇರುತ್ತವೆ. ಆದರೆ ಅವುಗಳು ಇಷ್ಟೊಂದು ಸ್ಪಷ್ಟವಾಗಿ ಹಸುವಿನಂತೆ ಕಾಣಲಾರವು. 2021ರಲ್ಲಿ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕಡಲ ತೀರದಲ್ಲಿ ಕೌ ಡಾಲ್ಫಿನ್ ವೊಂದು ಅಲೆಗಳ ಹೊಡೆತಕ್ಕೆ ಸಿಲುಕಿ ದಡಕ್ಕೆ ಬಂದು ಬಿದ್ದಿತ್ತು ಎಂಬುದನ್ನು ಇಲ್ಲಿ ಸ್ಮರಿಸಬಹುದು. ಒಟ್ಟಾರೆ ಸದ್ಯ ವೈರಲ್ ಆಗಿರುವ ಹಸುವಿಂತೆ ಕಾಣುವ ಡಾಲ್ಫಿನ್ ರೀತಿಯ ವಿಚಿತ್ರ ಜೀವಿಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಯನ್ನು ಹುಟ್ಟುಹಾಕಿದೆ.