ಬೆಂಗಳೂರು: ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ವತಿಯಿಂದ 2021-22ನೇ ಸಾಲಿಗೆ ಆರ್.ಕೆ.ವಿ.ವೈ ಫಲಾನುಭವಿ ಆಧಾರಿತ ಕಾರ್ಯಕ್ರಮವಾದ ‘’ಮುಖ್ಯಮಂತ್ರಿಗಳ ಅಮೃತ ಜೀವನ ಯೋಜನೆಯನ್ನು’’ ಅನುಷ್ಟಾನಗೊಳಿಸಲು, ಸಹಾಯಧನಕ್ಕಾಗಿ ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಈ ಯೋಜನೆಯಡಿ ಒಂದು ಮಿಶ್ರತಳಿ ಹಾಲು ಕರೆಯುವ ಹಸು/ಒಂದು ಸುಧಾರಿತ ಎಮ್ಮೆ ವಿತರಿಸಲಾಗುವುದು. ಘಟಕದ ಮೊತ್ತ 62,000 ರೂ. ಆಗಿದ್ದು, ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ 20,665 ರೂ. ಮತ್ತು ಸಾಮಾನ್ಯ ವರ್ಗದ ಫಲಾನುಭವಿಗಳಿಗೆ 15,500 ರೂ. ಸಹಾಯಧನ ಒದಗಿಸಲಾಗುವುದು. ಸಹಾಯಧನ ಹೊರತು ಪಡಿಸಿದಂತೆ ಉಳಿದ ಮೊತ್ತವನ್ನು ಫಲಾನುಭವಿಗಳು ವಂತಿಗೆ ಅಥವಾ ಸಾಲದ ರೂಪದಲ್ಲಿ ಬ್ಯಾಂಕ್‌ನಿಂದ ಪಡೆಯಬಹುದಾಗಿದೆ.
ಅರ್ಹ ಫಲಾನುಭವಿಗಳು ಭರ್ತಿ ಮಾಡಿದ ಅರ್ಜಿಗಳನ್ನು ಆಯಾ ತಾಲ್ಲೂಕಿನ ಪಶು ಆಸ್ಪತ್ರೆಯ ಮುಖ್ಯ ಪಶುವೈದ್ಯಾಧಿಕಾರಿಗಳಿಗೆ(ಆಡಳಿತ) 2021ರ ಅಕ್ಟೋಬರ್ 10 ರೊಳಗೆ ಸಲ್ಲಿಸುವುದು.
ಹೆಚ್ಚಿನ ಮಾಹಿತಿಗಾಗಿ ಮುಖ್ಯ ಪಶು ವೈದ್ಯಾಧಿಕಾರಿಗಳು (ಆಡಳಿತ), ಪಶು ಆಸ್ಪತ್ರೆ, ದೇವನಹಳ್ಳಿ ಮೊ.ಸಂ.: 9480910509, ದೊಡ್ಡಬಳ್ಳಾಪುರ ಮೊ.ಸಂ.: 9632047920, ಹೊಸಕೋಟೆ ಮೊ.ಸಂ.:9448988649, ನೆಲಮಂಗಲ ಮೊ.ಸಂ.: 9845637387 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಪನಿರ್ದೇಶಕ(ಆಡಳಿತ)ರು ತಿಳಿಸಿದ್ದಾರೆ.