ಕೋವಿಶೀಲ್ಡ್ ಹಾಗೂ ಕೊವ್ಯಾಕ್ಸಿನ್ ಲಸಿಕೆಗಳು ಕೊರೊನಾ ರೂಪಾಂತರಿಗಳಾದ ಆಲ್ಫಾ, ಬೀಟಾ, ಗಾಮಾ ಹಾಗೂ ಡೆಲ್ಟಾಗಳ ವಿರುದ್ಧ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಲಿದೆ ಎಂದು ಕೇಂದ್ರ ಸಚಿವಾಲಯ ಮಾಹಿತಿ ನೀಡಿದೆ.
ಕೊರೊನಾ ವೈರಸ್ ಸೋಂಕಿಗೆ ನಾಲ್ಕು ರೂಪಾಂತರವಿದೆ ಅವು ಆಲ್ಪಾ, ಬೀಟಾ, ಗಾಮಾ ಹಾಗೂ ಡೆಲ್ಟಾ. ಈಗ ದೇಶದಲ್ಲಿ ಬರುತ್ತಿರುವ ಡೆಲ್ಟಾ ಪ್ಲಸ್ ರೂಪಾಂತರಿಯು ಡೆಲ್ಟಾದ ವಂಶಾವಳಿಯಾಗಿದೆ.
ಬೆಚ್ಚಿಬೀಳಿಸುವಂತಿದೆ ದೆವ್ವಗಳ ಬೆನ್ನತ್ತಿ ಹೊರಟ ಜೋಡಿಯ ಕ್ಯಾಮೆರಾ ಕಣ್ಣಿಗೆ ಕಂಡ ದೃಶ್ಯ
ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಐಸಿಎಂಆರ್ ನಿರ್ದೇಶಕ ಡಾ. ಬಲರಾಂ ಭಾರ್ಗವ, ಕೊರೊನಾದ ವಿವಿಧ ರೂಪಾಂತರಿಗಳ ತೀವ್ರತೆಯನ್ನ ಕಡಿಮೆ ಮಾಡುವ ಸಾಮರ್ಥ್ಯ ಕೊರೊನಾ ಲಸಿಕೆಗಳಿಗಿದೆ. ಕೊವ್ಯಾಕ್ಸಿನ್ ಆಲ್ಪಾ ರೂಪಾಂತರದೊಂದಿಗೆ ಬದಲಾಗೋದಿಲ್ಲ. ಅದು ತನ್ನ ಸ್ಥಿತಿಯಲ್ಲೇ ಇರಲಿದೆ ಎಂದು ಹೇಳಿದ್ದಾರೆ.
BIG NEWS: ಮಾಜಿ ಕಾರ್ಪೊರೇಟರ್ ಹತ್ಯೆಗೆ ಕುಟುಂಬದಿಂದಲೇ ನಡೆದಿತ್ತು ಡೀಲ್…!
ಕೋವಿಶೀಲ್ಡ್ ಆಲ್ಫಾದೊಂದಿಗೆ ಕೊಂಚ ಅಂದರೆ 2.5 ಪಟ್ಟು ಕಡಿಮೆಯಾಗುತ್ತದೆ. ಡೆಲ್ಟಾ ರೂಪಾಂತರಿಗಳ ವಿರುದ್ಧ ಲಸಿಕೆಯು ಪರಿಣಾಮಕಾರಿಯಾಗಿದೆ ಎಂದು ಹೇಳಿದ್ರು.
ಇನ್ನು ಡೆಲ್ಟಾ ಪ್ಲಸ್ ರೂಪಾಂತರಿಯ ಬಗ್ಗೆ ಇದೇ ವೇಳೆ ಮಾತನಾಡಿದ ಅವರು, ಪ್ರಸ್ತುತ 12 ದೇಶಗಳಲ್ಲಿ ಡೆಲ್ಟಾ ಪ್ಲಸ್ ರೂಪಾಂತರಿ ಕಂಡು ಬಂದಿದೆ. ಭಾರತದ 10 ರಾಜ್ಯಗಳಲ್ಲಿ ಸದ್ಯ 48 ಇಂತಹ ಕೇಸುಗಳು ವರದಿಯಾಗಿದೆ. ಅವುಗಳನ್ನ ಸ್ಥಳೀಕರಿಸಲಾಗಿದೆ. ಹಾಗೂ ಅವರನ್ನ ಪ್ರತ್ಯೇಕಿಸಲಾಗಿದೆ ಎಂದು ಹೇಳಿದ್ರು.