ಕೋವಿಡ್ ಲಸಿಕೆ ವಿಚಾರದಲ್ಲಿ ಕೋವಿಶೀಲ್ಡ್ ಹಾಗೂ ಕೋವ್ಯಾಕ್ಸಿನ್‌ಗಳ ನಡುವೆ ಯಾವುದು ಉತ್ತಮ ಎಂಬ ಬಗ್ಗೆ ದೇಶವಾಸಿಗಳಲ್ಲಿ ಭಾರೀ ಚರ್ಚೆ ನಡೆಯುತ್ತಲೇ ಇದೆ.
ಇದಕ್ಕೊಂದು ’ಮಿಶ್ರ’ ಪರಿಹಾರ ಕೊಟ್ಟಿರುವ ಐಸಿಎಂಆರ್, ಕೋವಿಶೀಲ್ಡ್ ಹಾಗೂ ಕೋವ್ಯಾಕ್ಸಿನ್‌ನ ಮಿಶ್ರಣದಿಂದ ರೋಗನಿರೋಧಕ ಶಕ್ತಿ ಇನ್ನಷ್ಟು ವರ್ಧಿಸಲಿದೆ ಎಂದು ತಿಳಿಸಿದೆ.
ಇಂಜಿನಿಯರಿಂಗ್ ಸೇರಿ ವೃತ್ತಿಪರ ಕೋರ್ಸ್ ಸೇರುವ ವಿದ್ಯಾರ್ಥಿಗಳಿಗೆ ಮುಖ್ಯ ಮಾಹಿತಿ: ಆಗಸ್ಟ್ 28, 29 ರಂದು ಸಿಇಟಿ
ಕೋವಿಡ್-19 ಲಸಿಕೆಯ ಈ ’ಮಿಕ್ಸ್’ ಉತ್ತರ ಪ್ರದೇಶದಲ್ಲಿ ಒಳ್ಳೆ ಫಲಿತಾಂಶಗಳನ್ನು ತೋರಿದೆ ಎನ್ನಲಾಗಿದೆ. ರಾಜ್ಯದ 18 ಮಂದಿ ಮೇಲೆ ಈ ಪ್ರಯೋಗ ಮಾಡಲಾಗಿದೆ. ಇವರಿಗೆ ಮೊದಲ ಡೋಸ್ ಅನ್ನು ಕೋವಿಶೀಲ್ಡ್ ಹಾಗೂ ಎರಡನೇ ಡೋಸ್ ಅನ್ನು ಕೋವ್ಯಾಕ್ಸಿನ್ ಕೊಡಲಾಗಿದೆ.
“ಕೋವಿಶೀಲ್ಡ್ ಅಥವಾ ಕೋವ್ಯಾಕ್ಸಿನ್ ಮಿಶ್ರಣದಿಂದ ಇನ್ನಷ್ಟು ಉತ್ತಮವಾದ ರೋಗನಿರೋಧಕ ಶಕ್ತಿ ಉತ್ಪತ್ತಿಯಾಗಿರುವುದು ಕಂಡುಬಂದಿದೆ” ಎಂದು ಐಸಿಎಂಆರ್ ವಿಜ್ಞಾನಿ ರಜ್ನಿ ಕಾಂತ್ ತಿಳಿಸಿದ್ದಾರೆ.