ಕೊರೋನ ವೈರಸ್ ವಿರುದ್ಧ ಲಸಿಕೆಗಳನ್ನು ಕೈಗೆಟುಕುವಂತೆ ಮಾಡುವ ಪ್ರಯತ್ನವೊಂದರಲ್ಲಿ, ಭಾರತದಲ್ಲಿ ಕೋವಿಡ್-19 ವಿರುದ್ಧ ವ್ಯಾಪಕವಾಗಿ ಬಳಸಲಾಗುವ ಎರಡು ಲಸಿಕೆಗಳಾದ ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್‌ನ ಬೆಲೆಯನ್ನು ಪ್ರತಿ ಡೋಸ್‌ಗೆ ರೂ. 275 ಕ್ಕೆ ಮಿತಿಗೊಳಿಸಲಾಗುತ್ತದೆ ಹಾಗೂ 150 ರ ಹೆಚ್ಚುವರಿ ಸೇವಾ ಶುಲ್ಕವನ್ನು ವಿಧಿಸಲಾಗುತ್ತದೆ.
ಭಾರತದಲ್ಲಿ ತುರ್ತು ಬಳಕೆ ಅನುಮತಿ (ಇಯುಎ) ಪಡೆದಿರುವ ಎರಡು ಲಸಿಕೆಗಳು ಶೀಘ್ರದಲ್ಲೇ ಭಾರತೀಯ ಮದ್ದು ನಿಯಂತ್ರಣ ಪ್ರಾಧಿಕಾರದಿಂದ (ಡಿಸಿಜಿಐ) ನಿಯಮಿತ ಮಾರುಕಟ್ಟೆ ಅನುಮೋದನೆಯನ್ನು ಪಡೆಯುವ ನಿರೀಕ್ಷೆಯಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಬಾದಾಮಿ ನೆನೆಸದೆ ತಿಂದರೆ ಏನಾಗುತ್ತೆ ಗೊತ್ತಾ…..?
ಪ್ರಸ್ತುತ, ಭಾರತ್ ಬಯೋಟೆಕ್‌ನ ಕೋವಾಕ್ಸಿನ್ ಖಾಸಗಿ ಆಸ್ಪತ್ರೆಗಳಿಗೆ ಪ್ರತಿ ಡೋಸ್‌ಗೆ ರೂ. 1,200 ದರದಲ್ಲಿ ಲಭ್ಯವಿದೆ ಆದರೆ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ ಕೋವಿಶೀಲ್ಡ್‌ಗೆ ಖಾಸಗಿ ಸೌಲಭ್ಯಗಳಲ್ಲಿ ರೂ. 780 ವೆಚ್ಚವಾಗುತ್ತದೆ. ಈ ಬೆಲೆಗಳು ರೂ. 150 ಸೇವಾ ಶುಲ್ಕವನ್ನು ಒಳಗೊಂಡಿವೆ.
ಲಸಿಕೆಗಳನ್ನು ಕೈಗೆಟುಕುವಂತೆ ಮಾಡಲು ಬೆಲೆಗಳಿಗೆ ಮಿತಿ ನಿಗದಿ ಪಡಿಸಲು ಪ್ರಾರಂಭಿಸಲು ರಾಷ್ಟ್ರೀಯ ಔಷಧೀಯ ಬೆಲೆ ಪ್ರಾಧಿಕಾರಕ್ಕೆ (NPPA) ನಿರ್ದೇಶನ ನೀಡಲಾಗಿದೆ.
“ಲಸಿಕೆಗಳ ಬೆಲೆಗಳಿಗೆ ಮಿತಿ ನಿಗದಿ ಪಡಿಸುವ ನಿಟ್ಟಿನಲ್ಲಿ ಕೆಲಸ ಮಾಡಲು ಎನ್‌ಪಿಪಿಎಗೆ ತಿಳಿಸಲಾಗಿದೆ. ಬೆಲೆಯನ್ನು ಪ್ರತಿ ಡೋಸ್‌ಗೆ ರೂ. 275 ಕ್ಕೆ ಮಿತಿಗೊಳಿಸಲಾಗುವುದು ಮತ್ತು ಹೆಚ್ಚುವರಿ ಸೇವಾ ಶುಲ್ಕವಾಗಿ 150 ರೂ. ಆಗುತ್ತದೆ” ಎಂದು ಮೂಲವೊಂದು ಪಿಟಿಐಗೆ ತಿಳಿಸಿದೆ.