ಕೊರೊನಾ ಯಾವಾಗ ಹೋಗುತ್ತೆ ಎಂಬುದು ಯಾರಿಗೂ ತಿಳಿದಿಲ್ಲ. ಕೊರೊನಾ ಮತ್ತೆ ಒಕ್ಕರಿಸುವ ಸಾಧ್ಯತೆಯನ್ನು ಅಲ್ಲಗಳೆಯಲು ಆಗುವುದಿಲ್ಲ. ಚೀನಾದಲ್ಲಿ ಮತ್ತೆ ಕೊರೊನಾ ಶುರುವಾಗಿದೆ. ದೇಶದಲ್ಲಿ ಕೊರೊನಾ ಮೂರನೇ ಅಲೆ ಭಯವಿದೆ. ಈ ಮಧ್ಯೆ ಕೊರೊನಾ ಲಸಿಕೆ ಅಭಿಯಾನ ಚುರುಕು ಪಡೆದಿದೆ. ದೇಶದಲ್ಲಿ ಮುಂದಿನ ತಿಂಗಳು ಎರಡರಿಂದ 18 ವರ್ಷದೊಳಗಿನ ಮಕ್ಕಳಿಗೆ ಕೊರೊನಾ ಲಸಿಕೆ ಶುರುವಾಗಲಿದೆ ಎನ್ನಲಾಗ್ತಿದೆ.
ಸರ್ಕಾರಿ ನೌಕರರ ʼಡಿಎʼಯಲ್ಲಿ ಶೇ.3 ರಷ್ಟು ಹೆಚ್ಚಳ: ಇಲ್ಲಿದೆ ಈ ಕುರಿತ ಒಂದಷ್ಟು ಮಾಹಿತಿ
ಕೊರೊನಾ ವಿರುದ್ಧ ರಕ್ಷಣೆ ಪಡೆಯಲು ವಿಶ್ವ ಆರೋಗ್ಯ ಸಂಸ್ಥೆ ಕೆಲವು ಮಾರ್ಗಸೂಚಿಗಳನ್ನು ಹೊರಡಿಸಿದೆ. ಇವುಗಳನ್ನು ಪ್ರತಿಯೊಂದು ದೇಶದಲ್ಲೂ ಅನುಸರಿಸುವುದು ಅವಶ್ಯಕ. ಆ ಮಾರ್ಗಸೂಚಿಗಳ ಬಗ್ಗೆ ಭಾರತದ ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕೆಂಬ ಕಾರಣಕ್ಕೆ ಬಾಲಿವುಡ್ ಸೂಪರ್ ಸ್ಟಾರ್, ಅಮಿತಾಬ್ ಬಚ್ಚನ್ ಧ್ವನಿಯಲ್ಲಿ ಕೆಲ ಸಂದೇಶಗಳನ್ನು ನೀಡಲಾಗ್ತಿತ್ತು. ಕಾಲರ್ ಟ್ಯೂನ್ ರೂಪದಲ್ಲಿ ಇದು ಜನರಿಗೆ ಕೇಳಿಸ್ತಾಯಿತ್ತು. ಫೋನ್ ರಿಂಗಿನ ಬದಲು, ಫೋನ್ ಮಾಡಿದವರಿಗೆ, ಕೊರೊನಾ ಬಗ್ಗೆ ಮಾಹಿತಿ ಸಿಗ್ತಿತ್ತು.
ಈ ಬಗ್ಗೆ ಅನೇಕರು ವಿರೋಧ ಕೂಡ ವ್ಯಕ್ತಪಡಿಸಿದ್ರು. ಈಗ ಫೋನ್ ಕಾಲರ್ ಟ್ಯೂನ್ ಬದಲಾಗಿದೆ. ಇನ್ಮುಂದೆ ಅಮಿತಾಬ್ ಬಚ್ಚನ್ ಧ್ವನಿ ಕೇಳುವುದಿಲ್ಲ. ಇದ್ರ ಬದಲು ಕೊರೊನಾ ಲಸಿಕೆ ಬಗ್ಗೆ ಮಾಹಿತಿ ಸಿಗಲಿದೆ. ಅಕ್ಟೋಬರ್ 21ರಂದು ದೇಶ 100 ಕೋಟಿ ಡೋಸ್ ಪೂರ್ಣಗೊಂಡಿದೆ. ಈ ಸಂತೋಷಕ್ಕೆ ಸರ್ಕಾರ ಕಾಲರ್ ಟ್ಯೂನ್ ಬದಲಾಯಿಸಿದೆ. ಈಗ ಲಸಿಕೆ ಅಭಿಯಾನದ ಯಶಸ್ಸಿಗೆ ಸಂಬಂಧಿಸಿದ ಸಂದೇಶ ಕೇಳಲಿದೆ.