ಕೊರೊನಾ, ಒಮಿಕ್ರಾನ್ ಏರಿಕೆ ಮಧ್ಯೆಯೇ ದೇಶದಲ್ಲಿ ಮಕ್ಕಳಿಗೆ ಕೊರೊನಾ ಲಸಿಕೆ ಶುರುವಾಗಲಿದೆ. ಜನವರಿ 3ರಿಂದ 15-18 ವರ್ಷ ವಯಸ್ಸಿನ ಮಕ್ಕಳಿಗೆ ಕೊರೊನಾ ಲಸಿಕೆ ಅಭಿಯಾನ ಶುರುವಾಗಲಿದೆ. ಮಕ್ಕಳ ಕೊರೊನಾ ಲಸಿಕೆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲದ ಕಾರಣ ಪಾಲಕರು ಗೊಂದಲಕ್ಕೊಳಗಾಗಿದ್ದಾರೆ.
ಮಕ್ಕಳಿಗೆ ಕೊರೊನಾ ಲಸಿಕೆ ನೋಂದಣಿ ಎಲ್ಲಿ ಮಾಡ್ಬೇಕು? ಯಾವ ಯಾವ ದಾಖಲೆ ಬೇಕು ಎಂಬ ಪ್ರಶ್ನೆ ಪಾಲಕರಲ್ಲಿದೆ. ಒಂದು ವೇಳೆ ಮಕ್ಕಳಿಗೆ ಆಧಾರ್ ಕಾರ್ಡ್ ಇಲ್ಲವೆಂದ್ರೆ ಚಿಂತೆ ಬೇಡ. ಆಧಾರ್ ಇಲ್ಲದ ಮಕ್ಕಳು ಕೂಡ ಕೊರೊನಾ ಲಸಿಕೆ ಪಡೆಯಬಹುದು.
ಮೊದಲು ಪಾಲಕರು ಕೋವಿನ್ ಅಪ್ಲಿಕೇಶನ್ ಅಥವಾ ವೆಬ್‌ಸೈಟ್ https://www.cowin.gov.in/ ಗೆ ಭೇಟಿ ನೀಡಬೇಕು. ಇಲ್ಲಿ ಮುಖಪುಟದಲ್ಲಿ, ವ್ಯಾಕ್ಸಿನೇಷನ್ ಆಯ್ಕೆಯನ್ನು ಕ್ಲಿಕ್ ಮಾಡಬೇಕು.
ತೆರೆಯುವ ಇನ್ನೊಂದು ಪುಟದಲ್ಲಿ ಮಕ್ಕಳ ಆಯ್ಕೆ ಮೇಲೆ ಕ್ಲಿಕ್ ಮಾಡಬೇಕು. ಅಲ್ಲಿ ಮಗುವಿನ ಹೆಸರು, ವಯಸ್ಸು ಮತ್ತು ಇತರ ವಿವರಗಳನ್ನು ನಮೂದಿಸಬೇಕು. ಇದರ ನಂತರ, ಮಗುವಿನ ಆಧಾರ್ ಕಾರ್ಡ್ ಅಥವಾ 10 ನೇ ತರಗತಿ ಅಥವಾ ಯಾವುದೇ ಇತರ ವರ್ಗದ ಗುರುತಿನ ಚೀಟಿಯನ್ನು ದಾಖಲೆ ರೂಪದಲ್ಲಿ ನೀಡಬೇಕು. ನಂತ್ರ ಮನೆಗೆ ಹತ್ತಿರವಿರುವ ಲಸಿಕೆ ಕೇಂದ್ರ ಮತ್ತು ಸ್ಲಾಟ್ ಅನ್ನು ಆಯ್ಕೆ ಮಾಡಬೇಕು.8. ಸ್ಲಾಟ್ ಪಡೆದ ನಂತರ, ಅದರ ಮೇಲೆ ಕ್ಲಿಕ್ ಮಾಡಿ ಮತ್ತು ಸಲ್ಲಿಸಬೇಕು.