ನವದೆಹಲಿ: ಕೊರೊನಾ ಲಸಿಕೆ ವಿತರಣೆಗೆ ಪೂರ್ವಸಿದ್ಧತೆ ಕೈಗೊಳ್ಳಲಾಗಿದ್ದು, ಮುಂದಿನ ವಾರದಿಂದ ಪಂಜಾಬ್ ನಲ್ಲಿ ಕಾರ್ಯವಿಧಾನ ಪರೀಕ್ಷಿಸಲಾಗುವುದು.
ಕೊರೋನಾ ಲಸಿಕೆಗಾಗಿ ಕಾಯುವ ಸಮಯ ಮುಗಿದಿದೆ. ಪಂಜಾಬ್ ನಲ್ಲಿ ಮುಂದಿನ ವಾರದಿಂದ ಲಸಿಕೆ ನೀಡಲು ಪೂರ್ವ ತಯಾರಿ ಮಾಡಿಕೊಳ್ಳಲಾಗಿದ್ದು, ಲೂಧಿಯಾನ ಮತ್ತು ಶಾಹಿದ್ ಭಗತ್ ಸಿಂಗ್ ನಗರ ಜಿಲ್ಲೆಗಳಲ್ಲಿ ಡಿಸೆಂಬರ್ 28 ಮತ್ತು 29ರಂದು 5 ಸ್ಥಳದಲ್ಲಿ ಡ್ರೈ ರನ್ ನಡೆಸಲಾಗುವುದು.
ಆರೋಗ್ಯ ವ್ಯವಸ್ಥೆಯಡಿ ಕೋವಿಡ್-19 ವ್ಯಾಕ್ಸಿನೇಷನ್ ರೋಲ್ ಔಟ್ ಮಾಡಲು ಸಿದ್ಧಪಡಿಸಿದ ಕಾರ್ಯವಿಧಾನಗಳನ್ನು ಪರೀಕ್ಷಿಸುವ ಗುರಿಯನ್ನು ಡ್ರೈ ರನ್ ಹೊಂದಿದೆ ಎಂದು ಪಂಜಾಬ್ ಆರೋಗ್ಯ ಸಚಿವ ಬಲ್ ಬೀರ್ ಸಿಂಗ್ ಹೇಳಿದ್ದಾರೆ. ಕೋವಿಡ್ ಲಸಿಕೆ ವಿತರಣೆ ಕಾರ್ಯ ಆರಂಭಿಸುವ ಮೊದಲು ಉಂಟಾಗುವ ಅಡಚಣೆಗಳನ್ನು ಸರಿಪಡಿಸಿಕೊಳ್ಳಲು ಇದು ನೆರವಾಗಲಿದೆ. ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಡ್ರೈ ರನ್ ನಡೆಸಲು ತೀರ್ಮಾನಿಸಲಾಗಿದೆ. ವ್ಯಾಕ್ಸಿನೇಷನ್ ಗೆ ಬೇಕಾದ ಎಲ್ಲಾ ತಯಾರಿ ಮಾಡಿಕೊಳ್ಳಲಾಗುವುದು ಎಂದು ಹೇಳಿದ್ದಾರೆ.