alex Certify ಕೋವಿಡ್ ಲಸಿಕೆ: ಜನಸಾಮಾನ್ಯರಿಗೆ ಬೇಕಿಲ್ಲ ಬೂಸ್ಟರ್ ಡೋಸ್, ಈ ಹಂತದಲ್ಲಿ ಸೂಕ್ತವಲ್ಲ ಎಂದ ವಿಜ್ಞಾನಿಗಳು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೋವಿಡ್ ಲಸಿಕೆ: ಜನಸಾಮಾನ್ಯರಿಗೆ ಬೇಕಿಲ್ಲ ಬೂಸ್ಟರ್ ಡೋಸ್, ಈ ಹಂತದಲ್ಲಿ ಸೂಕ್ತವಲ್ಲ ಎಂದ ವಿಜ್ಞಾನಿಗಳು

ನವದೆಹಲಿ: ಕೊರೊನಾ ಸೋಂಕು ನಿಯಂತ್ರಿಸುವ ಉದ್ದೇಶದಿಂದ ಕೋವಿಡ್ ಲಸಿಕೆ ನೀಡಲಾಗುತ್ತಿದೆ. ಸೋಂಕು ತಡೆಗೆ 2 ಡೋಸ್ ಲಸಿಕೆ ನೀಡಲಾಗುತ್ತಿದ್ದು, ಕೊರೋನಾ ಮುಂದುವರೆದಿರುವುದರಿಂದ ಬೂಸ್ಟರ್ ಡೋಸ್ ನೀಡುವ ಕುರಿತು ಚಿಂತನೆ ನಡೆದಿದೆ. ಆದರೆ, ಜನಸಾಮಾನ್ಯರಿಗೆ ಬೂಸ್ಟರ್ ಡೋಸ್ ಅಗತ್ಯವಿಲ್ಲ ಎಂದು ಹೇಳಲಾಗಿದೆ.

ಬೂಸ್ಟರ್ ಡೋಸ್ ಜನಸಾಮಾನ್ಯರಿಗೆ ಪರಿಣಾಮಕಾರಿಯಾಗಿ ಕೆಲಸ ಮಾಡುವ ಕುರಿತಂತೆ ಯಾವುದೇ ವಿಶ್ವಾಸಾರ್ಹ ಮಾಹಿತಿ, ಪುರಾವೆ ಇಲ್ಲವೆಂದು ‘ದಿ ಲ್ಯಾನ್ಸೆಟ್’ ನಲ್ಲಿ ವಿಜ್ಞಾನಿಗಳ ವರದಿ ಪ್ರಕಟವಾಗಿದೆ.

ಅಮೆರಿಕ ಆಹಾರ ಮತ್ತು ಔಷಧ ಆಡಳಿತ(FDA), ವಿಶ್ವ ಆರೋಗ್ಯ ಸಂಸ್ಥೆಯ(WHO) ಪರಣಿತರ ಒಳಗೊಂಡ ಅಂತರಾಷ್ಟ್ರೀಯ ವಿಜ್ಞಾನಿಗಳ ತಂಡ ವಿಮರ್ಶಾ ವರದಿಯನ್ನು ಪ್ರಕಟಿಸಿದ್ದು, ವರದಿಯಲ್ಲಿ ಜನಸಾಮಾನ್ಯರಿಗೆ ಬೂಸ್ಟರ್ ಡೋಸ್ ಅಗತ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದೆ.

ಕೊರೋನಾ ಸೋಂಕಿನಿಂದ ಜನರನ್ನು ರಕ್ಷಿಸಲು ಲಸಿಕೆ ನೀಡಲಾಗುತ್ತಿದೆ. ಆದರೆ, ಬೂಸ್ಟರ್ ಡೋಸ್ ಗಳಿಂದ ಯಾವುದೇ ಪ್ರಯೋಜನವಿಲ್ಲ. ರೋಗನಿರೋಧಕ ಶಕ್ತಿ ಕಡಿಮೆ ಇರುವವರಲ್ಲಿ ಕೆಲವರಿಗೆ ಮಾತ್ರ ಅನುಕೂಲವಾಗಬಹುದು. ಜನಸಾಮಾನ್ಯರಿಗೆ ಬೂಸ್ಟರ್ ಡೋಸ್ ಅಗತ್ಯವಿಲ್ಲವೆಂದು ಹೇಳಲಾಗಿದೆ.

ಪ್ರಸ್ತುತ ಲಭ್ಯವಿರುವ ಲಸಿಕೆಗಳು ಸುರಕ್ಷಿತ, ಪರಿಣಾಮಕಾರಿಯಾಗಿದ್ದು ಜೀವಗಳನ್ನು ಉಳಿಸುತ್ತವೆ ಎಂದು ಅಧ್ಯಯನ ಸಹ ಲೇಖಕಿ, ಡಬ್ಲ್ಯುಹೆಚ್‌ಒ ಮುಖ್ಯ ವಿಜ್ಞಾನಿ ಸೌಮ್ಯ ಸ್ವಾಮಿನಾಥನ್ ಹೇಳಿದ್ದಾರೆ.

ಲಸಿಕೆ ಹಾಕಿದ ಜನರಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಮೂಲಕ ಕೋವಿಡ್ -19 ಪ್ರಕರಣಗಳ ಸಂಖ್ಯೆಯನ್ನು ಮತ್ತಷ್ಟು ಕಡಿಮೆ ಮಾಡುವ ಆಲೋಚನೆ ಆಕರ್ಷಕವೆನಿಸಿದರೂ, ಹಾಗೆ ಮಾಡುವ ಯಾವುದೇ ನಿರ್ಧಾರವು ಸಾಕ್ಷ್ಯವನ್ನು ಆಧರಿಸಿರಬೇಕು ಎಂದು ತಿಳಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...