ವಿಶ್ವದಲ್ಲೇ ಅತ್ಯಂತ ಬೃಹತ್ ಲಸಿಕಾ ಅಭಿಯಾನ ಎಂಬ ಖ್ಯಾತಿಯ ’ಕೊರೊನಾ ತಡೆ ಲಸಿಕಾ’ ಅಭಿಯಾನವನ್ನು ಕೇಂದ್ರ ಸರ್ಕಾರ ಆರಂಭಿಸಿ ಆರು ತಿಂಗಳಿಗೂ ಹೆಚ್ಚು ಅವಧಿ ಕಳೆದಿದೆ. ದೇಶಾದ್ಯಂತ ಶೇ.18 ಪ್ರಮಾಣಕ್ಕೂ ಹೆಚ್ಚು ಯುವಕ-ಯುವತಿಯರು ಲಸಿಕೆಯನ್ನು ಪೂರ್ಣವಾಗಿ ಪಡೆದಿದ್ದಾರೆ.
ಒಟ್ಟಾರೆಯಾಗಿ ಇದುವರೆಗೂ ದೇಶದಲ್ಲಿ 72 ಕೋಟಿ ಡೋಸ್‌ಗಳನ್ನು ನೀಡಲಾಗಿದೆ. ಆ ಪೈಕಿ ಶೇ.58 ಯುವ ಸಮುದಾಯ ಕೇವಲ ಒಂದೇ ಡೋಸ್ ಲಸಿಕೆ ಪಡೆದಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.
40ರ ನಂತರ ತ್ವಚೆ ಅಂದ ಕಳೆದುಕೊಳ್ಳುತ್ತಿರುವ ಚಿಂತೆ ಕಾಡ್ತಿದೆಯಾ…? ಹಾಗಾದ್ರೆ ಹೀಗೆ ಮಾಡಿ
ಇನ್ನು, ಲಸಿಕೆಗಳಿಂದ ದೇಶದ ಸೋಂಕಿಗೆ ಬಲಿಯಾಗುವುದು ಕಡಿಮೆ ಆಗುತ್ತಿರುವ ಪ್ರಮಾಣಕ್ಕೆ ಸಂಬಂಧಿಸಿದಂತೆಯೂ ಸಚಿವಾಲಯ ಮಾಹಿತಿ ನೀಡಿದೆ. ಅದರಂತೆ, ಕೋವಿಡ್-19 ಲಸಿಕೆಯ ಮೊದಲ ಡೋಸ್ ಪಡೆದರೆ ಸಾವನ್ನು ತಡೆಗಟ್ಟುವ ಸಾಧ್ಯತೆ ಶೇ. 96.5ರಷ್ಟಿದೆಯಂತೆ.
ಲಸಿಕೆಯ ಎರಡೂ ಡೋಸ್ ಪಡೆದರೆ ಸಾವನ್ನು ದೂರ ಇರಿಸುವ ಸಾಧ್ಯತೆಯು ಶೇ.97.6 ರಷ್ಟು ಇದೆ ಎಂದು ವಿಜ್ಞಾನಿಗಳು ತಿಳಿಸಿದ್ದಾಗಿ ಸಚಿವಾಲಯ ಹೇಳಿದೆ.
ಈ ಸಂಬಂಧ ಕಳೆದ ಏಪ್ರಿಲ್‌ನಿಂದ ಆಗಸ್ಟ್‌ವರೆಗಿನ ದೇಶದಲ್ಲಿನ ಲಸಿಕೆ, ಸೋಂಕಿತರ ಸಾವಿನ ಅಂಕಿ-ಅಂಶಗಳನ್ನು ತೀವ್ರ ಅಧ್ಯಯನ ಕೂಡ ನಡೆಸಲಾಗಿದೆಯಂತೆ.
ದೇಶದಲ್ಲಿ ಒಟ್ಟು 35 ಜಿಲ್ಲೆಗಳಲ್ಲಿ ಕೊರೊನಾ ಆರ್ಭಟ ಜೋರಿದೆ. ಶೇ.10ಕ್ಕಿಂತ ಹೆಚ್ಚು ಪಾಸಿಟಿವಿಟಿ ದರವಿದೆ. ಬಾಕಿ 30 ಜಿಲ್ಲೆಗಳಲ್ಲಿ ಪಾಸಿಟಿವಿಟಿ ಪ್ರಮಾಣವು 5-10% ನಷ್ಟಿದೆ.