ವಿಶ್ವದಾದ್ಯಂತ ಕೊರೊನಾ ಲಸಿಕೆ ಅಭಿಯಾನ ನಡೆಯುತ್ತಿದೆ. ಕೊರೊನಾ ನಿಯಂತ್ರಣಕ್ಕೆ ಲಸಿಕೆ ಮೊದಲ ಅಸ್ತ್ರವೆಂದು ನಂಬಲಾಗಿದೆ. ಕೊರೊನಾ ಲಸಿಕೆ ಹಾಕಿಸಿಕೊಳ್ಳುವವರಲ್ಲಿ ಅನೇಕ ಪ್ರಶ್ನೆಗಳು ಕಾಡ್ತಿವೆ.
ಕೊರೊನಾ ಲಸಿಕೆ ಹಾಕಿಸಿಕೊಂಡ ನಂತ್ರ ಏನು ಮಾಡ್ಬೇಕು? ಏನು ಮಾಡ್ಬಾರದು ಎಂಬ ಪ್ರಶ್ನೆಗೆ ಜನರು ಅಲ್ಲಿ, ಇಲ್ಲಿ ಉತ್ತರ ಕಂಡುಕೊಳ್ತಿದ್ದಾರೆ. ಈ ಮಧ್ಯೆ ರಷ್ಯಾ ಸರ್ಕಾರ ಕೊರೊನಾ ಲಸಿಕೆ ಹಾಕಿಸಿಕೊಂಡವರಿಗೆ ಸೆಕ್ಸ್ ನಿಂದ ದೂರವಿರುವಂತೆ ಸಲಹೆ ನೀಡಿದೆ.
ಕೊರೊನಾ ಲಸಿಕೆ ಪಡೆದ ಮೂರು ದಿನ ಶಾರೀರಿಕ ಸಂಬಂಧ ಬೆಳೆಸದಂತೆ ರಷ್ಯಾದ ಆರೋಗ್ಯ ಇಲಾಖೆ ಜನರಿಗೆ ಸಲಹೆ ನೀಡಿದೆ. ಶಾರೀರಿಕ ಸಂಬಂಧದಿಂದ ದೈಹಿಕ ಒತ್ತಡ ಹೆಚ್ಚಾಗುತ್ತದೆ. ಹಾಗಾಗಿ ಮೂರು ದಿನಗಳ ಕಾಲ ದೂರವಿರುವಂತೆ ತಜ್ಞರು ಸಲಹೆ ನೀಡಿದ್ದಾರೆ. ಲೈಂಗಿಕ ಕ್ರಿಯೆ ಮಾತ್ರವಲ್ಲ ಎಲ್ಲ ಕಠಿಣ ದೈಹಿಕ ಚಟುವಟಿಕೆಯನ್ನು ತಪ್ಪಿಸುವಂತೆ ಸಲಹೆ ನೀಡಲಾಗಿದೆ. ಲಸಿಕೆ ತೆಗೆದುಕೊಂಡ ನಂತ್ರ ವೋಡ್ಕಾ ಸೇವನೆ ಮಾಡದಂತೆ ಹಾಗೂ ಧೂಮಪಾನ, ಉಗಿ ತೆಗೆದುಕೊಳ್ಳದಂತೆ ಈ ಹಿಂದೆ ರಷ್ಯಾ ಸರ್ಕಾರ ಸಲಹೆ ನೀಡಿತ್ತು.
ರಷ್ಯಾದಲ್ಲಿ ಎರಡು ಕೊರೊನಾ ವೈರಸ್ ಲಸಿಕೆ ಸಿದ್ಧವಾಗಿದೆ. ಆದ್ರೆ ವಿಶ್ವದಲ್ಲಿ ಅತಿ ಕಡಿಮೆ ಲಸಿಕೆ ನೀಡಿದ ದೇಶವಾಗಿದೆ. ರಷ್ಯಾದಲ್ಲಿ, ಕೊರೊನಾ ವೈರಸ್ ಲಸಿಕೆಯ ಎರಡೂ ಪ್ರಮಾಣವನ್ನು ಕೇವಲ ಶೇಕಡಾ 13ರಷ್ಟು ಜನರಿಗೆ ಮಾತ್ರ ನೀಡಲಾಗಿದೆ. ಇತರ ಯುರೋಪಿಯನ್ ದೇಶಗಳಲ್ಲಿ ಈ ಅಂಕಿ ಅಂಶವು ಸರಾಸರಿ ಶೇಕಡಾ 30ಕ್ಕಿಂತ ಹೆಚ್ಚಾಗಿದೆ.