ಕೊರೊನಾ 2ನೇ ಅಲೆಯಿಂದಾಗಿ ದೇಶದಲ್ಲಿ ಒಟ್ಟು 646 ಮಂದಿ ವೈದ್ಯರು ಸೋಂಕಿನಿಂದ ಸಾವಿಗೀಡಾಗಿದ್ದಾರೆ ಎಂದು ಭಾರತೀಯ ವೈದ್ಯಕೀಯ ಸಂಘ ಮಾಹಿತಿ ನೀಡಿದೆ.
ಭಾರತೀಯ ವೈದ್ಯಕೀಯ ಸಂಘ ನೀಡಿರುವ ಮಾಹಿತಿಯ ಪ್ರಕಾರ ದೆಹಲಿಯಲ್ಲಿ ಅತೀ ಹೆಚ್ಚು ಅಂದರೆ 109 ಮಂದಿ ವೈದ್ಯರು ಸಾವಿಗೀಡಾಗಿದ್ದಾರೆ. ಇದಾದ ಬಳಿಕ ಬಿಹಾರದಲ್ಲಿ 97, ಉತ್ತರ ಪ್ರದೇಶ 79, ರಾಜಸ್ಥಾನ 43, ಜಾರ್ಖಂಡ್ 39, ಗುಜರಾತ್ 37, ಆಂಧ್ರಪ್ರದೇಶ 35, ತೆಲಂಗಾಣ 34, ಮತ್ತು ಪಶ್ಚಿಮ ಬಂಗಾಳ 30 ಮಂದಿ ವೈದ್ಯರು ಸಾವಿಗೀಡಾಗಿದ್ದಾರೆ. ಇದು ಜೂನ್ 5ರವರೆಗೆ ಸಂಗ್ರಹಿಸಿದ ನೋಂದಾವಣಿಯಾಗಿದೆ.
ಕೊರೊನಾ ಮೊದಲ ಅಲೆಯಲ್ಲಿ 748 ಮಂದಿ ವೈದ್ಯರು ಸಾವನ್ನಪ್ಪಿದ್ದರು ಎಂದು ಭಾರತೀಯ ವೈದ್ಯಕೀಯ ಸಂಘ ಹೇಳಿದೆ.
ಮಹಾರಾಷ್ಟ್ರದಲ್ಲಿ ಕೊರೊನಾ 2ನೆ ಅಲೆಯಲ್ಲಿ 23 ಮಂದಿ ವೈದ್ಯರು ಜೀವ ತೆತ್ತಿದ್ದಾರೆ ಎಂದು ಐಎಂಎ ಮಾಹಿತಿ ನೀಡಿದೆ.
ಭಾರತವು ಕೊರೊನಾ 2ನೆ ಅಲೆಯ ವಿರುದ್ಧ ಹೋರಾಡುತ್ತಿದ್ದು ದಿನದಿಂದ ದಿನಕ್ಕೆ ಸೋಂಕಿನ ಸಂಖ್ಯೆ ಇಳಿಮುಖವಾಗ್ತಿದೆ. ಆದರೆ ಸಾವಿನ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗ್ತಾ ಇರೋದು ಆತಂಕದ ವಿಚಾರವಾಗಿದೆ.