ಮನುಕುಲಕ್ಕೆ ಕೋವಿಡ್ ಅಪ್ಪಳಿಸಿದಾಗಿನಿಂದಲೂ ವಿಶ್ವಾದ್ಯಂತ ಜನರಿಗೆ ಚಿರಪರಿಚಿತ ಮುಖವಾಗಿಬಿಟ್ಟಿರುವ ವಿಶ್ವ ಸಂಸ್ಥೆ ಮುಖ್ಯಸ್ಥ ಟೆಡ್ರೋಸ್ ಅಧನೋಂ ಘೆಬ್ರೆಯೆಸಸ್ ಇದೀಗ ಭಯ ಹುಟ್ಟಿಸುವ ಮತ್ತೊಂದು ಆತಂಕ ವ್ಯಕ್ತಪಡಿಸಿದ್ದಾರೆ.
“ಡೆಲ್ಟಾ ರೂಪಾಂತರಿಯೊಂದಿಗೆ ಎಲ್ಲೆಡೆ ವ್ಯಾಪಕವಾಗುತ್ತಿರುವ ಒಮಿಕ್ರಾನ್ ಮುಂದಿನ ದಿನಗಳಲ್ಲಿ ಕೇಸುಗಳ ಸುನಾಮಿಯನ್ನೇ ಸೃಷ್ಟಿಸಲಿದೆ ಎಂಬ ಆತಂಕ ನನ್ನದು,” ಎನ್ನುತ್ತಾರೆ ಟೆಡ್ರೋಸ್ ಅಧನೋಂ ಘೆಬ್ರೆಯೆಸಸ್. ಜಾಗತಿಕವಾಗಿ ಒಮಿಕ್ರಾನ್‌ನ 65.5 ಕೋಟಿ ಪ್ರಕರಣಗಳು ಅದಾಗಲೇ ವರದಿಯಾಗಿವೆ.
ಇಲ್ಲಿದೆ ಈ ವರ್ಷ ಗಲ್ಲಾಪೆಟ್ಟಿಗೆ ದೋಚಿದ ಹಾಲಿವುಡ್ ಚಲನಚಿತ್ರಗಳ ಪಟ್ಟಿ
“ಇದು ಹೀಗೇ ಮುಂದುವರೆಯಲಿದ್ದು, ಅದಾಗಲೇ ಹೈರಾಣಾಗಿರುವ ಆರೋಗ್ಯ ಸೇವಾ ಕಾರ್ಯಕರ್ತರ ಹಾಗೂ ಆರೋಗ್ಯ ವ್ಯವಸ್ಥೆಗಳ ಮೇಲೆ ಇನ್ನಷ್ಟು ಒತ್ತಡ ಬೀರಲಿವೆ” ಎಂದು ಮತ್ತೊಂದು ಬಾಂಬ್ ಹಾಕಿದ್ದಾರೆ ಟೆಡ್ರೋಸ್ ಅಧನೋಂ ಘೆಬ್ರೆಯೆಸಸ್.
2019ರ ಅಂತ್ಯದಲ್ಲಿ ಕಾಣಿಸಿಕೊಂಡ ಈ ಸೋಂಕಿನ ಹೊಸ ರೂಪಾಂತರಿ ಮಾಡುತ್ತಿರುವ ಅವಾಂತರದಿಂದಾಗಿ ಯೂರೋಪ್ ಮತ್ತು ಅಮೆರಿಕದಲ್ಲಿ ಆಸ್ಪತ್ರೆಗಳ ಮೇಲೆ ಏಕಾಏಕಿ ಭಯಂಕರವಾದ ಒತ್ತಡಗಳು ಬೀಳದಂತೆ ತಡೆಯಲು ಹಲವಾರು ನಿರ್ಬಂಧಗಳನ್ನು ತರಲು ಅಲ್ಲಿನ ಸರ್ಕಾರಗಳು ಚಿಂತನೆ ಮಾಡುವಂತೆ ಆಗಿದೆ. ಮತ್ತೊಂದೆಡೆ ಈ ನಿರ್ಬಂಧಗಳು ಕಳೆದ ಎರಡು ವರ್ಷಗಳಿಂದ ಅದಾಗಲೇ ಸೃಷ್ಟಿಸಿರುವ ಆರ್ಥಿಕ ಹೊಡೆತಗಳ ಅರಿವಿರುವ ಕಾರಣ, ಲಾಕ್‌ಡೌನ್‌ಗಳ ಹೇರಿಕೆಗೂ ಮುನ್ನ ನೂರು ಬಾರಿ ಚಿಂತಿಸುವಂತೆ ಆಗಿದೆ.