ಕೋವಿಡ್ ಎರಡನೇ ಅಲೆಯಿಂದ ತತ್ತರಿಸಿರುವ ಭಾರತ ಮೂರನೇ ಅಲೆಯ ಆತಂಕದಲ್ಲಿದೆ. ಈ ನಡುವೆ ಎಚ್ಚರಿಕೆ ಸಂದೇಶವೊಂದು ಬಂದಿದೆ.
ಆಗಸ್ಟ್ ಅಂತ್ಯದ ವೇಳೆಗೆ ಭಾರತವನ್ನು ಅಪ್ಪಳಿಸುವ ಮೂರನೇ ಅಲೆ ಗಂಭೀರವಾಗಿರಲ್ಲ, ಸೌಮ್ಯವಾಗಿರಬಹುದು ಎಂದು ಉನ್ನತ ವೈದ್ಯಕೀಯ ಸಂಸ್ಥೆ ಅಭಿಪ್ರಾಯಪಟ್ಟಿದೆ.
ಡೆಲ್ಟಾ ಮತ್ತು ಡೆಲ್ಟಾ ಪ್ಲಸ್ ರೂಪಾಂತರಿ ಸಾಂಕ್ರಾಮಿಕ ಪ್ರಕರಣಗಳ ಹೆಚ್ಚಳದ ಮಧ್ಯೆ ದೇಶಕ್ಕೆ ಮೂರನೇ ಅಲೆಯ ಬಗ್ಗೆ ಆತಂಕಗಳು ಹೆಚ್ಚುತ್ತಿವೆ.
ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್)ನ ಸಾಂಕ್ರಾಮಿಕ ರೋಗಶಾಸ್ತ್ರ ಮತ್ತು ಸಾಂಕ್ರಾಮಿಕ ರೋಗಗಳ ಮುಖ್ಯಸ್ಥ ಡಾ. ಸಮೀರನ್ ಪ್ರಕಾರ, ರಾಷ್ಟ್ರವ್ಯಾಪಿ ಮೂರನೇ ಅಲೆ ಬರಬಹುದು. ಆದರೆ ಅದು ಎರಡನೇ ಅಲೆಯಷ್ಟು ಹೆಚ್ಚು ಅಥವಾ ತೀವ್ರವಾಗಿರುತ್ತದೆ ಎಂದು ಅರ್ಥವಲ್ಲ ಎಂದಿದ್ದಾರೆ.
ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪುರಸ್ಕೃತೆ ಸುರೇಖಾ ಸಿಕ್ರಿ ಇನ್ನಿಲ್ಲ
ವಿಶ್ವವು ಈಗ ಮೂರನೇ ಅಲೆಯ ಆರಂಭಿಕ ಹಂತದಲ್ಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮಹಾನಿರ್ದೇಶಕ ಟೆಡ್ರೊಸ್ ಅಧಾನಮ್ ಘೆಬ್ರೆಯೆಸಸ್ ಹೇಳಿಕೆ ನೀಡಿದ್ದಾರೆ.
ಅಂತರರಾಷ್ಟ್ರೀಯ ಆರೋಗ್ಯ ನಿಯಂತ್ರಣ ತುರ್ತು ಸಮಿತಿಯ ಸಭೆಯಲ್ಲಿ ಮಾತನಾಡಿರುವ ಟೆಡ್ರೊಸ್, ಜನರ ಓಡಾಟ, ನಿಯಮಪಾಲನೆ ಮಾಡದಿರುವುದು ಪ್ರಕರಣಗಳ ಸಂಖ್ಯೆ ಮತ್ತು ಸಾವುಗಳೆರಡರಲ್ಲೂ ಹೆಚ್ಚಳಕ್ಕೆ ಕಾರಣವಾಗಿದೆ. ದುರದೃಷ್ಟವಶಾತ್, ನಾವು ಈಗ ಮೂರನೇ ಅಲೆಯ ಆರಂಭಿಕ ಹಂತಗಳಲ್ಲಿದ್ದೇವೆ ಎಂದು ಹೇಳಿದರು.