ಕೋವಿಡ್ ಸೋಂಕಿನ ಮೂರನೇ ಅಲೆಯನ್ನು ಎದುರಿಸಲು ಭಾರತ ಸಜ್ಜಾಗಿದ್ದು, ಆತಂಕ ಪಡಬೇಕಾದ ಅಗತ್ಯವಿಲ್ಲ ಎಂದು ಮಣಿಪಾಲ್ ಆಸ್ಪತ್ರೆಯ ಹಿರಿಯ ವೈದ್ಯ ಡಾ. ಪಿಯೂಶ್ ಗೋಯೆಲ್ ತಿಳಿಸಿದ್ದಾರೆ.
“ಕೋವಿಡ್ ಸಾಂಕ್ರಮಿಕದ ವಿಚಾರದಲ್ಲಿ ನಾವೀಗ ಚೆನ್ನಾಗಿ ಅನುಭವ ಪಡೆದಿದ್ದೇವೆ ಎಂದು ಭಾವಿಸುತ್ತೇನೆ. ಸಾಮಾಜಿಕ ಅಂತರ, ಕೈಗಳ ಸ್ವಚ್ಛತೆ, ಮಾಸ್ಕ್‌ಧಾರಣೆಯಂತ ಕ್ರಮಗಳ ಬಗ್ಗೆ ಪ್ರತಿಯೊಬ್ಬರಿಗೂ ಅದಾಗಲೇ ಅರಿವಾಗಿದೆ. ಜೊತೆಗೆ ಸರ್ಕಾರಗಳು ಸಹ ಹಿಂದಿಗಿಂತಲೂ ಚೆನ್ನಾಗಿ ಸನ್ನದ್ಧವಾಗಿವೆ. ಹಾಗಾಗಿ ಹಿಂದಿನಂತೆ ಈ ಬಾರಿ ಪರಿಸ್ಥಿತಿ ಉಲ್ಪಣಗೊಳ್ಳುವ ಸಾಧ್ಯತೆ ಇರುವುದಿಲ್ಲ. ಆದರೆ ಕೋವಿಡ್ ಸುರಕ್ಷತಾ ಮಾರ್ಗಸೂಚಿಗಳನ್ನು ಪ್ರತಿಯೊಬ್ಬರೂ ಈ ಬಾರಿ ಪಾಲಿಸಬೇಕು” ಎಂದು ಡಾ. ಗೋಯೆಲ್ ಹೇಳುತ್ತಾರೆ.
ʼಒಮಿಕ್ರಾನ್ʼ ಸೋಂಕಿನ ಹೊಸ ಗುಣ ಲಕ್ಷಣಗಳ ಕುರಿತು ನಿಮಗೆ ತಿಳಿದಿರಲಿ ಈ ಮಾಹಿತಿ
“ಒಮಿಕ್ರಾನ್ ಡೆಲ್ಟಾ ರೂಪಾಂತರಿಯಷ್ಟು ತೀವ್ರವಾಗಿಲ್ಲ. ಇದರ ಸ್ಪೈಕ್ ಪ್ರೋಟೀನ್‌ನಲ್ಲಿ 30ರಷ್ಟು ರೂಪಾಂತರಗಳಿವೆ. ಸ್ಪೈಕ್ ಪ್ರೋಟೀನ್ ಆತಿಥೇಯ ದೇಹದ ಕೋಶಕ್ಕೆ ಅಂಟಿಕೊಂಡು ಸೋಂಕನ್ನು ಹಬ್ಬಿಸುತ್ತದೆ. ಆದರೆ ಒಮಿಕ್ರಾನ್ ರೂಪಾಂತರಿಯ ತೀವ್ರತೆ ಡೆಲ್ಟಾ ರೂಪಾಂತರಿಗೆ ಹೋಲಿಸಿದಲ್ಲಿ ತೀರಾ ಕಡಿಮೆ ಇದೆ ಎಂದು ಅಧ್ಯಯನಗಳು ತಿಳಿಸುತ್ತವೆ” ಎಂದು ಗೋಯೆಲ್ ತಿಳಿಸಿದ್ದಾರೆ.
ಈ ಕುರಿತು ಮಾತನಾಡಿದ ಭಾರತೀಯ ಸಾರ್ವಜನಿಕ ಆರೋಗ್ಯ ಪ್ರತಿಷ್ಠಾನದ (ಪಿಎಚ್‌ಎಫ್‌ಐ) ಅಧ್ಯಕ್ಷ ಡಾ. ಕೆ ಶ್ರೀನಾಥ್ ರೆಡ್ಡಿ,” ಬಹುತೇಕ ಮಂದಿ ಈಗ ಲಸಿಕೆ ಪಡೆದಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಭಾರತವು ಆಸ್ಪತ್ರೆಯಲ್ಲಿ ಹೆಚ್ಚಿನ ಹಾಸಿಗೆಗಳು, ವೈದ್ಯಕೀಯ ಆಮ್ಲಜನಕ, ತುರ್ತು ಮದ್ದುಗಳಂಥ ಕ್ರಮಗಳನ್ನು ಸಮರ್ಪಕವಾದ ಪೂರೈಕೆ ಹೊಂದಿವೆ. ಹಾಗಾಗಿ, ಎರಡನೇ ಅಲೆಯ ವೇಳೆ ಇದ್ದ ಪರಿಸ್ಥಿತಿ ಈ ಬಾರಿ ಬರುವುದಿಲ್ಲ. ಒಮಿಕ್ರಾನ್‌ನಿಂದ ಹುಟ್ಟುತ್ತಿರುವ ಬಹುತೇಕ ಪ್ರಕರಣಗಳು ಲಘು ರೋಗ ಲಕ್ಷಣಗಳನ್ನು ಹೊಂದಿದ್ದು, ಆಸ್ಪತ್ರೆಯ ಅಗತ್ಯ ಅಷ್ಟಾಗಿ ಬಾರದು” ಎನ್ನುತ್ತಾರೆ.