ನವದೆಹಲಿ: ದೇಶದಲ್ಲಿ ಈವರೆಗೆ ಒಟ್ಟು 196 ಕೋವಿಡ್ -19 ಉಪ-ರೂಪಾಂತರ ಜೆಎನ್ .1 ಪ್ರಕರಣಗಳು ಪತ್ತೆಯಾಗಿದ್ದು, ರೂಪಾಂತರದ ಉಪಸ್ಥಿತಿಯನ್ನು ಪತ್ತೆ ಮಾಡಿದ ರಾಜ್ಯಗಳ ಪಟ್ಟಿಗೆ ಒಡಿಶಾ ಸೇರಿದೆ ಎಂದು ತಿಳಿದು ಬಂದಿದೆ.
ಹತ್ತು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಈವರೆಗೆ ವೈರಸ್ನ ಜೆಎನ್ .1 ಉಪ-ರೂಪಾಂತರದ ಉಪಸ್ಥಿತಿಯನ್ನು ಪತ್ತೆ ಮಾಡಿವೆ.
ಕೇರಳ (83), ಗೋವಾ (51), ಗುಜರಾತ್ (34), ಕರ್ನಾಟಕ (8), ಮಹಾರಾಷ್ಟ್ರ (7), ರಾಜಸ್ಥಾನ (5), ತಮಿಳುನಾಡು (4), ತೆಲಂಗಾಣ (2), ಒಡಿಶಾ (1) ಮತ್ತು ದೆಹಲಿ (1) ಈ ರಾಜ್ಯಗಳಾಗಿವೆ ಎಂದು ಭಾರತೀಯ ಸಾರ್ಸ್-ಕೋವ್-2 ಜೀನೋಮಿಕ್ಸ್ ಕನ್ಸೋರ್ಟಿಯಂ (ಐಎನ್ಎಸ್ಎಸಿಒಜಿ) ತಿಳಿಸಿದೆ.