ನವದೆಹಲಿ: ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿದೆ ಎನ್ನಲಾದ ಕೋವಿಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊದಲ ಎಫ್ಐ ಆರ್ ದಾಖಲಾಗಿದ್ದು, ರಾಜ್ಯ ಸರ್ಕಾರದ ಕ್ರಮದ ಬಗ್ಗೆ ಬಿಜೆಪಿ ನಾಯಕರು ಕಿಡಿಕಾರಿದ್ದಾರೆ.
ಇದೇ ವಿಚಾರವಾಗಿ ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದ ಜಗದೀಶ್ ಶೆಟ್ಟರ್, ಇದೊಂದು ಸೇಡಿನ ರಾಜಕಾರಣ ಹೊರತು ಮತ್ಯಾವ ಉದ್ದೇಶ ಕಾಣುತ್ತಿಲ್ಲ ಎಂದರು.
ಕೋವಿಡ್ ಪ್ರಕರಣ ಸಂಬಂಧ ಜಸ್ಟಿಸ್ ಜಾನ್ ಮೈಕೆಲ್ ಕುನ್ಹಾ ಆಯೋಗ ಕೇವಲ ಮಧ್ಯಂತರ ವರದಿಯನ್ನು ಮತ್ರ ನೀಡಿದೆ. ಇನ್ನೂ ಸಂಪೂರ್ಣ ವರದಿ ಬಂದಿಲ್ಲ. ಮಧ್ಯಂತರ ವರದಿ ಆಧರಿಸಿ ಎಫ್ಐಆರ್ ದಾಖಲಿಸುತ್ತಾರೆ ಎಂದರೆ ಇದು ರಾಜ್ಯಕೀಯ ದುರುದ್ದೇಶ. ಸಂಪೂರ್ಣ ವರದಿ ಬಂದ ಬಳಿಕ ಅದರ ಮೇಲೆ ತನಿಖೆ ಆಗಬೇಕು. ಕೇವಲ ಮದ್ಯಂತರ ವರದಿ ಮೇಲೆ ಎಫ್ಐರ್ ದಾಖಲಿಸಿರುವುದು ಕಾಂಗ್ರೆಸ್ ನವರ ದ್ವೇಷದ ರಾಜಕಾರಣ ಹೊರತು ಬೇರೆನೂ ಇಲ್ಲ. ಇದಕ್ಕೆಲ್ಲ ಬಿಜೆಪಿ ಹೆದರುವುದೂ ಇಲ್ಲ ಎಂದು ವಾಗ್ದಾಳಿ ನಡೆಸಿದರು.