ಬೆಂಗಳೂರು: ಕೊರೋನಾ ಎರಡನೆಯ ಅಲೆಯಲ್ಲಿ ಭಾರೀ ಸಂಖ್ಯೆಯ ಜನರಿಗೆ ಸೋಂಕು ತಗುಲಿದೆ. ಹೆಚ್ಚಿನ ಸಾವು ನೋವು ಉಂಟಾಗಿದೆ. ಇದೇ ವೇಳೆ ಬ್ಲಾಕ್ ಫಂಗಸ್ ಭಾರೀ ಆತಂಕ ಮೂಡಿಸಿದೆ.
ಕೊರೋನಾ ಸೋಂಕಿನಿಂದ ಚೇತರಿಸಿಕೊಂಡ ಅನೇಕರಲ್ಲಿ ಅಪಾಯಕಾರಿ ಬ್ಲಾಕ್ ಫಂಗಸ್ ಕಾಣಿಸಿಕೊಳ್ಳುತ್ತಿದೆ. ಇದರ ಬಗ್ಗೆ ನಿರ್ಲಕ್ಷ್ಯ ತೋರದೆ ಕೂಡಲೇ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.
ಕೊರೋನಾ ಸೋಂಕಿನಿಂದ ಗುಣಮುಖರಾದ ಅನೇಕರಲ್ಲಿ ರೋಗನಿರೋಧಕ ಶಕ್ತಿ ಕಡಿಮೆ ಇರುತ್ತದೆ. ಗಾಳಿಯ ಮೂಲಕ ಕಪ್ಪು ಶಿಲೀಂಧ್ರದ ಕಣಗಳು ದೇಹವನ್ನು ಪ್ರವೇಶಿಸಿದಾಗ ಆರೋಗ್ಯ ಹದಗೆಡುತ್ತದೆ. ಇಂತಹ ಸಂದರ್ಭದಲ್ಲಿ ನಿರ್ಲಕ್ಷ್ಯ ತೋರದೆ ಕೂಡಲೇ ಚಿಕಿತ್ಸೆ ಪಡೆದುಕೊಳ್ಳಬೇಕು ಎನ್ನಲಾಗಿದೆ.
ಪ್ರತಿ ಸಾವಿರ ಜನರಲ್ಲಿ ಮೂವರಿಗೆ ಬ್ಲಾಕ್ ಫಂಗಸ್ ಕಾಣಿಸಿಕೊಳ್ಳುತ್ತಿದ್ದು, ಅದರಲ್ಲಿಯೂ ಮಧುಮೇಹ ಇರುವವರಿಗೆ ಎಚ್ಚರಿಕೆಯಿಂದ ಇರುವಂತೆ ತಿಳಿಸಲಾಗಿದೆ. ನಿರ್ಲಕ್ಷ ತೋರಿಸಿದಲ್ಲಿ ಕಣ್ಣು, ಶಾಶಕೋಶ, ಮೂತ್ರಪಿಂಡಗಳಿಗೆ ಹಾನಿಯಾಗಬಹುದು ಎಂದು ಹೇಳಲಾಗಿದೆ.
ಇನ್ನು ಬ್ಲಾಕ್ ಫಂಗಸ್ ಗೆ ಚಿಕಿತ್ಸೆ ದುಬಾರಿಯಾಗಿದೆ. ಪ್ರತಿದಿನ 50 ರಿಂದ 60 ಸಾವಿರ ರೂಪಾಯಿ ಚಿಕಿತ್ಸಾ ವೆಚ್ಚ ತಗಲುತ್ತದೆ. ಹೀಗಾಗಿ ಮುನ್ನೆಚ್ಚರಿಕೆ ವಹಿಸುವಂತೆ ತಜ್ಞರು ತಿಳಿಸಿದ್ದಾರೆ.