ಮುಂಬಯಿಯಿಂದ ಗೋವಾಗೆ ತೆರಳಿದ್ದ ಕ್ರೂಸ್‌ಲೈನರ್ ನೌಕೆಯೊಂದರಲ್ಲಿದ್ದ ಪ್ರಯಾಣಿಕರೊಬ್ಬರು ಕೋವಿಡ್-19 ಪಾಸಿಟಿವ್ ಆಗಿರುವ ಕಾರಣ ಅದರಲ್ಲಿದ್ದ 2,000ದಷ್ಟು ಪ್ರಯಾಣಿಕರನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ವಿಷಯ ತಿಳಿದ ಕೂಡಲೇ ಹಡಗಿನ ಬಳಿ ಪೊಲೀಸ್ ಕಾವಲು ಇಟ್ಟ ಗೋವಾ ರಾಜ್ಯ ಸರ್ಕಾರ, ಪ್ರಯಾಣಿಕರನ್ನು ಇಳಿಯಲು ಬಿಡಲಿಲ್ಲ.
ಎಲ್ಲಾ ಪ್ರಯಾಣಿಕರು ಹಾಗೂ ಸಿಬ್ಬಂದಿಯನ್ನು ಇದೀಗ ಪರೀಕ್ಷೆಗೆ ಒಳಪಡಿಸಲಾಗಿದ್ದು, ಸೋಂಕಿತ ಮಂದಿಯನ್ನು ನೌಕೆಯಲ್ಲೇ ಐಸೋಲೇಷನ್‌ನಲ್ಲಿ ಇಡಲಾಗಿದೆ
ವರದಿಗಳ ಪ್ರಕಾರ, ಆರ್‌ಟಿ-ಪಿಸಿಆರ್ ಪರೀಕ್ಷೆಗಳ ವರದಿ ಬರುವವರೆಗೂ ನೌಕೆಯಲ್ಲಿದ್ದ ಪ್ರಯಾಣಿಕರಿಗೆ ಕೆಳಗಿಳಿಯದಿರಲು ಸೂಚಿಸಲಾಗಿದೆ. ಪಿಪಿಇ ಕಿಟ್‌ಧಾರಿ ವೈದ್ಯಕೀಯ ತಂಡವೊಂದನ್ನು ನೌಕೆಯೊಳಗೆ ಕಳುಹಿಸಿ ಆರ್‌ಟಿ-ಪಿಸಿಆರ್ ಪರೀಕ್ಷೆಗಳನ್ನು ಮಾಡಲಾಗಿದೆ.
2016 ಪ್ರಯಾಣಿಕರನ್ನು ಹೊತ್ತ ಕಾರ್ಡೆಲಿಯಾ ಕ್ರೂಸಸ್ ಎಂಪ್ರೆಸ್ ನೌಕೆಯು ಮುಂಬಯಿಯಿಂದ ಹೊರಟು ಸದ್ಯ ಇಲ್ಲಿನ ಮೊರ್ಮುಗಾಂವ್ ಬಂದರಿನ ನಿಲ್ದಾಣದಲ್ಲಿದೆ. ಗೋವಾದಲ್ಲಿ ಲಂಗರು ಹಾಕಲು ಮುಂಬಯಿ ಬಂದರು ಟ್ರಸ್ಟ್ ನೌಕೆಗೆ ಅನುಮತಿ ಕೊಟ್ಟಿಲ್ಲ.
“ಕೋವಿಡ್-19ಗಾಗಿ ಎಲ್ಲ ಪ್ರಯಾಣಿಕರನ್ನು ಪರೀಕ್ಷೆಗೆ ಒಳಪಡಿಸಿದ ಬಳಿಕ, ಕೆಲವರಿಗೆ ಪಾಸಿಟಿವ್ ಇರುವುದು ಕಂಡುಬಂದಿದೆ. ನಾವು ಅವರನ್ನು ಹಡಗನ್ನು ಲಂಗರು ಹಾಕಲು ಬಿಟ್ಟಿಲ್ಲ. ಖಾಸಗಿ ಆಸ್ಪತ್ರೆಯೊಂದರ ಜೊತೆಗೆ ಕೋವಿಡ್ ಪರೀಕ್ಷೆ ಮಾಡುವ ಒಡಂಬಡಿಕೆಯೊಂದನ್ನು ನಾವು ಮಾಡಿಕೊಂಡಿದ್ದೇವೆ. ನೌಕೆ ಬಿಡುವ ಮುನ್ನ ಈ ಎಲ್ಲರನ್ನೂ ಪರೀಕ್ಷೆಗೆ ಒಳಪಡಿಸಲು ನಾವು ಅವರಿಗೆ ಸೂಚಿಸಿದ್ದೇವೆ,” ಎಂದು ಗೋವಾ ಸರ್ಕಾರದ ಆರೋಗ್ಯ ಸಚಿವ ವಿಶ್ವಜಿತ್ ರಾಣೆ ತಿಳಿಸಿದ್ದಾರೆ.