
ಇತ್ತೀಚೆಗೆ ಹೃದಯಾಘಾತದಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಅದರಲ್ಲೂ ಚಿಕ್ಕ ವಯಸ್ಸಿನವರು ಹೃದಯಾಘಾತದಿಂದ ಸಾವನ್ನಪ್ಪುತ್ತಿರುವುದು ಆಘಾತಕಾರಿ ಬೆಳವಣಿಗೆಯಾಗಿದೆ.
10 ವರ್ಷದೊಳಗಿನ ಮಕ್ಕಳು ಕೂಡ ಹೃದಯ ಸಂಬಂಧಿ ಕಾಯಿಲೆಗೆ ತುತ್ತಾಗುತ್ತಿದ್ದಾರೆ. ಕೋವಿಡ್ ಎಂ.ಆರ್.ಎನ್.ಎ. ಲಸಿಕೆ ಪಡೆದ ಮಕ್ಕಳಲ್ಲಿ ಹೃದಯಾಘಾತ ಪ್ರಕರಣ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿವೆ ಎಂದು ಅಧ್ಯಯನವೊಂದು ಹೇಳಿದೆ.
ಆಕ್ಸ್ ಫರ್ಡ್ ವಿಶ್ವವಿದ್ಯಾಲಯದ ಪ್ರೊ. ಕಾಲ್ನಡಿ ಅಂಡ್ಯೂಸ್ ನೇತೃತ್ವದ ಯುಕೆ ಪ್ರಮುಖ ವೈದ್ಯಕೀಯ ತಜ್ಞರು, ಸಾಂಕ್ರಾಮಿಕ ರೋಗಶಾಸ್ತ್ರಜ್ಞರು, ಜೈವಿಕ ಸಂಖ್ಯಾಶಾಸ್ತ್ರಜ್ಞರು, ಸಾರ್ವಜನಿಕ ಆರೋಗ್ಯ ತಜ್ಞರ ತಂಡ ಅಧ್ಯಯನ ನಡೆಸಿದ್ದು, 5 ರಿಂದ 15 ವರ್ಷದ 1.7 ಮಿಲಿಯನ್ ಮಕ್ಕಳನ್ನು ಅಧ್ಯಯನಕ್ಕೆ ಒಳಪಡಿಸಲಾಗಿದೆ.
ಈ ಸಂಶೋಧನಾ ತಂಡವು ಮಕ್ಕಳನ್ನು ಕೊವಿಡ್ ಲಸಿಕೆ ಪಡೆದವರು ಮತ್ತು ಪಡೆಯದವರು ಎಂದು ವಿಂಗಡಿಸಿ ಅಧ್ಯಯನ ಕೈಗೊಂಡಿದೆ. ಲಸಿಕೆ ಹಾಕದ ಒಂದೇ ಒಂದು ಮಗು ಕೂಡ ಹೃದಯ ಸಂಬಂಧಿ ತೊಂದರೆಯಿಂದ ಬಳಲುತ್ತಿಲ್ಲ ಎನ್ನುವುದು ಗೊತ್ತಾಗಿದೆ. ಆದರೆ, ಕೋವಿಡ್ ಎಂ.ಆರ್.ಎನ್.ಎ. ಲಸಿಕೆ ಪಡೆದುಕೊಂಡಿದ್ದ ಮಕ್ಕಳಲ್ಲಿ ಹೃದಯಾಘಾತದ ತೊಂದರೆಗಳು ಕಾಣಿಸಿಕೊಂಡಿವೆ. ಕೋವಿಡ್ ಎಂ.ಆರ್.ಎನ್.ಎ. ಲಸಿಕೆ ಮಕ್ಕಳಿಗೆ ಕಡಿಮೆ ರಕ್ಷಣೆ ನೀಡಿದೆ. ಇದನ್ನು ಪಡೆದ 14 ರಿಂದ 15 ವಾರಗಳ ನಂತರ ಅನೇಕರು ಸೋಂಕಿಗೆ ಒಳಗಾಗಿದ್ದಾರೆ ಎಂದು ಅಧ್ಯಯನದಲ್ಲಿ ಗೊತ್ತಾಗಿದೆ.