ಕಾನ್ಪುರದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ(IIT) ನಡೆಸಿದ ಇತ್ತೀಚಿನ ಸಂಶೋಧನೆಯಲ್ಲಿ ಶಾಕಿಂಗ್ ಮಾಹಿತಿಯೊಂದು ಬಯಲಾಗಿದೆ. ಸಂಶೋಧನೆಯ ಪ್ರಕಾರ, ಭಾರತದಲ್ಲಿ ಜೂನ್ ತಿಂಗಳಲ್ಲಿ ಕೊರೋನಾ ವೈರಸ್ನ ನಾಲ್ಕನೇ ಅಲೆ ಶುರುವಾಗಬಹುದು ಎನ್ನಲಾಗಿದೆ.
ಜೂನ್ ತಿಂಗಳಲ್ಲಿ ಶುರುವಾಗಲಿರುವ ಈ ನಾಲ್ಕನೇ ಅಲೆ, ಅಕ್ಟೋಬರ್‌ವರೆಗೆ ಮುಂದುವರಿಯುತ್ತದೆ ಎಂಬುದು ಸಂಶೋಧಕರ ಅಭಿಪ್ರಾಯ. ಆದರೆ ಮುಂಬರಲಿರುವ ಕೋವಿಡ್ ಅಲೆಯ ತೀವ್ರತೆಯು ಎಷ್ಟಿರುತ್ತದೆ ಎನ್ನುವುದನ್ನ ಇನ್ನು ನಿರ್ಧರಿಸಿಲ್ಲ.
ಭಾರತೀಯರಿಗಾಗಿ ಮತ್ತೊಂದು ಟ್ವಿಟರ್ ಖಾತೆ ತೆರೆದ ಕೇಂದ್ರ ಸರ್ಕಾರ
ಐಐಟಿಯ ಮೂವರು ವಿಜ್ಞಾನಿಗಳಾದ ಸಬರ ಪರ್ಷದ್ ರಾಜೇಶ್‌ಭಾಯ್, ಸುಭ್ರಾ ಶಂಕರ್ ಧರ್ ಮತ್ತು ಶಲಭ್ ಈ ಅಧ್ಯಯನವನ್ನು ನಡೆಸಿದ್ದಾರೆ. ನಾಲ್ಕನೇ ಅಲೆಯೊಂದಿಗೆ ಹೊಸ ರೂಪಾಂತರವು ಬರಬಹುದು ಎಂದು ಅಧ್ಯಯನವು ಹೇಳುತ್ತದೆ. ಅದರ ತೀವ್ರತೆಯು, ಸೋಂಕುಗಳು, ಮಾರಣಾಂತಿಕತೆ ಮುಂತಾದ ಅಂಶಗಳ ಮೇಲೆ ಅವಲಂಬಿತವಾಗಿರುತ್ತದೆ ಎಂದು ಸಂಶೋಧಕರು ತಿಳಿಸಿದ್ದಾರೆ.
ಸೋಂಕಿನ ಪ್ರಮಾಣವು ಅವರವರ ಲಸಿಕೆ ಸ್ಥಿತಿಯನ್ನು ಅವಲಂಬಿಸಿ ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು ಎಂದು ತಜ್ಞರು ತಿಳಿಸಿದ್ದಾರೆ. ಅದರ ಜೊತೆಗೆ ಮುಂಬರಲಿರುವ ಅಲೆಯ ಸಂದರ್ಭದಲ್ಲಿ ಒಮಿಕ್ರಾನ್ ವಿಕಸಗೊಳ್ಳುವುದನ್ನು ಮುಂದುವರೆಸುತ್ತದೆ. ಬಹುಶಃ ಒಮಿಕ್ರಾನ್ ವಿಕಸನವಾಗಿ, ಒಮಿಕ್ರಾನ್ ಪ್ಲಸ್ ಆಗಬಹುದು. ಈ ಆವೃತ್ತಿಯು BA.1. ಅಥವಾ BA.2. ಗಿಂತ ಮಾರಣಾಂತಿಕವಾಗಿರಲಿದೆ ಎಂದು ಅಧ್ಯಯನದಲ್ಲಿ ತಿಳಿಸಲಾಗಿದೆ.