
ಲಂಡನ್: ಬ್ರಿಟನ್ ನಲ್ಲಿ ಒಮಿಕ್ರಾನ್ ಗೆ ಮೊದಲ ಬಲಿಯಾಗಿದ್ದು, ಯುಕೆನಲ್ಲಿ ಒಮಿಕ್ರಾನ್ ಎಮರ್ಜೆನ್ಸಿ ಘೋಷಣೆ ಮಾಡಲಾಗಿದೆ.
ಕೊರೋನಾ ರೂಪಾಂತರಿ ಅತಿವೇಗವಾಗಿ ಹರಡುವ ಒಮಿಕ್ರಾನ್ ಗೆ ವಿಶ್ವದಲ್ಲೇ ಮೊದಲ ಇಂಗ್ಲೆಂಡ್ ನಲ್ಲಿ ಆಗಿದೆ. ಒಮಿಕ್ರಾನ್ ನಿಂದ ಪ್ರಾಣಾಪಾಯವಿಲ್ಲ ಎಂದು ಹೇಳಲಾಗಿತ್ತಾದರೂ, ಇದೇ ಮೊದಲ ಬಾರಿಗೆ ಬ್ರಿಟನ್ ನಲ್ಲಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಬ್ರಿಟನ್ ಸರ್ಕಾರ ನಿನ್ನೆಯಷ್ಟೇ ಒಮಿಕ್ರಾನ್ ಎಮರ್ಜೆನ್ಸಿ ಘೋಷಣೆ ಮಾಡಿತ್ತು.
ಪ್ರಧಾನಿ ಬೋರಿಸ್ ಜಾನ್ಸನ್ ಈ ಬಗ್ಗೆ ಮಾಹಿತಿ ನೀಡಿದ್ದು, 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಬೂಸ್ಟರ್ ಡೋಸ್ ನೀಡುವುದಾಗಿ ಹೇಳಿದ್ದಾರೆ.
ಜನ ನಿರ್ಲಕ್ಷ್ಯ ತೋರದೇ ಬೂಸ್ಟರ್ ಡೋಸ್ ಪಡೆಯಬೇಕು ಎಂದು ಅವರು ತಿಳಿಸಿದ್ದು, ಒಮಿಕ್ರಾನ್ ನಿಂದ ಪ್ರಾಣಾಪಾಯವಿಲ್ಲ ಅದು ಸೌಮ್ಯವಾದದು ಎಂಬ ಕಲ್ಪನೆಯನ್ನು ಜನರು ಬದಿಗಿಡಬೇಕು ಎಂದು ಹೇಳಿದ್ದಾರೆ.