
ದೇಶಾದ್ಯಂತ ಕೋವಿಡ್ ಪ್ರಕರಣಗಳಲ್ಲಿ ಇಳಿಕೆ ಕಂಡುಬಂದರೂ ಬಿಹಾರ, ಅಸ್ಸಾಂ ಹಾಗೂ ಕೇರಳಗಳಲ್ಲಿ ಕೊರೋನಾ ವೈರಸ್ ಸಂಬಂಧಿ ಸಾವುಗಳ ಸಂಖ್ಯೆಯಲ್ಲಿ ಕಳೆದ ಒಂದು ತಿಂಗಳಿನಿಂದ 80 ಪ್ರತಿಶತಕ್ಕಿಂತ ಹೆಚ್ಚಿನ ದರದ ಹೆಚ್ಚಳ ಕಂಡುಬಂದಿದೆ ಎಂದು ಅಧಿಕೃತ ದತ್ತಾಂಶಗಳು ತಿಳಿಸುತ್ತಿವೆ. ಮೇ 16-ಜೂನ್ 15ರ ಅವಧಿಯ ಅಂಕಿಅಂಶಗಳು ಇವಾಗಿವೆ.
ಬಾಯ್ ಫ್ರೆಂಡ್ ಜೊತೆಗಿನ ಕಚ್ಚಾಟದ ಕಹಿ ಮರೆಯಲು ಹೋಗಿ ಹಣ ಕಳೆದುಕೊಂಡ ಯುವತಿ
ಕೇಂದ್ರ ಆರೋಗ್ಯ ಸಚಿವಾಲಯದ ದತ್ತಾಂಶಗಳ ಪ್ರಕಾರ, ಬಿಹಾರದಲ್ಲಿ ಕೊವಿಡ್ ಸಾವುಗಳ ಸಂಖ್ಯೆಯಲ್ಲಿ 154.18 ಪ್ರತಿಶತದಷ್ಟು ಏರಿಕೆಯಾಗಿದೆ. ಕಳೆದ ವಾರವಷ್ಟೇ ರಾಜ್ಯದಲ್ಲಿನ ಕೋವಿಡ್ ಅಂಕಿಅಂಶಗಳನ್ನು ಬಿಹಾರ ಆರೋಗ್ಯ ಇಲಾಖೆ ಪರಿಷ್ಕರಿಸಿದ್ದು, ಒಟ್ಟಾರೆ ಲೆಕ್ಕಾಚಾರಕ್ಕೆ 3,951 ಸಾವುಗಳನ್ನು ಹೊಸದಾಗಿ ಸೇರಿಸಿದೆ.
ಉದ್ಯೋಗಿಗಳಿಗೆ ಭರ್ಜರಿ ಗುಡ್ ನ್ಯೂಸ್: ಈ ನೌಕರರ ವೈದ್ಯಕೀಯ ಮರುಪಾವತಿಯಲ್ಲಿ ಹೆಚ್ಚಳ
ಇದೇ ವೇಳೆ, ಅಸ್ಸಾಂನಲ್ಲಿ ಕೋವಿಡ್ ಸಾವುಗಳ ಸಂಖ್ಯೆಯಲ್ಲಿ 90% ಹೆಚ್ಚಳವಾಗಿದ್ದು, ಕೇರಳದಲ್ಲಿ 81.5%, ತಮಿಳುನಾಡಿನಲ್ಲಿ 73.21 ಪ್ರತಿಶತ ಹಾಗೂ ಕರ್ನಾಟಕದಲ್ಲಿ 55%ದಷ್ಟು ಸೋಂಕು ಸಂಬಂಧಿ ಸಾವುಗಳ ಸಂಖ್ಯೆ ಹೆಚ್ಛಾಗಿದೆ.
ವಿಶ್ಲೇಷಣೆ ಮಾಡಲಾದ 20 ರಾಜ್ಯಗಳ ಪೈಕಿ ಎಂಟು ರಾಜ್ಯಗಳಲ್ಲಿ ಕಳೆದ ಒಂದು ತಿಂಗಳಿನಿಂದ ಕೋವಿಡ್ ಸೋಂಕಿತರ ಸಂಖ್ಯೆಯಲ್ಲಿ 40%ಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಏರಿಕೆ ಕಂಡು ಬಂದಿದೆ ಎಂದು ಖುದ್ದು ಸರ್ಕಾರೀ ದತ್ತಾಂಶದಿಂದ ತಿಳಿದುಬಂದಿದೆ.