alex Certify ಕೋವಿಡ್ ಬೂಸ್ಟರ್‌ ಡೋಸ್: ಕೋ-ವಿನ್ ಮೂಲಕ ಹಿರಿಯ ನಾಗರಿಕರು ನೋಂದಣಿ ಮಾಡಲು ಇಲ್ಲಿದೆ ಟಿಪ್ಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೋವಿಡ್ ಬೂಸ್ಟರ್‌ ಡೋಸ್: ಕೋ-ವಿನ್ ಮೂಲಕ ಹಿರಿಯ ನಾಗರಿಕರು ನೋಂದಣಿ ಮಾಡಲು ಇಲ್ಲಿದೆ ಟಿಪ್ಸ್

ವೈದ್ಯರ ಸಲಹೆ ಮೇರೆಗೆ ಸಹ ರೋಗಗಳಿಂದ ಬಳಲುತ್ತಿರುವ 60 ವರ್ಷ ಮೇಲ್ಪಟ್ಟ ನಾಗರಿಕರಿಗೆ ಕೋವಿಡ್‌-19 ಲಸಿಕೆಯ ಮೂರನೇ ಲಸಿಕೆ ಹಾಕಲು ದೇಶದ ಆಡಳಿತ ವ್ಯವಸ್ಥೆಗಳು ಮುಂದಾಗಿದ್ದು, ಜನವರಿ 10, 2022ರಿಂದ ಮುನ್ನೆಚ್ಚರಿಕಾ ಬೂಸ್ಟರ್‌ ಡೋಸ್‌ಗಳನ್ನು ನೀಡುವ ಕಾರ್ಯಕ್ರಮಕ್ಕೆ ಚಾಲನೆ ಸಿಗಲಿದೆ.

ಮುನ್ನೆಚ್ಚರಿಕಾ ಬೂಸ್ಟರ್‌ ಡೋಸ್‌ಗಳನ್ನು ಪಡೆಯಲು ಹಿರಿಯ ನಾಗರಿಕರು ನೋಂದಣಿ ಮಾಡಿಕೊಳ್ಳಲು ಮಾರ್ಗಸೂಚಿ:

* 60 ವರ್ಷ ಮೇಲ್ಪಟ್ಟ, ಇತರೆ ರೋಗಗಳಿರುವ ಎಲ್ಲಾ ಹಿರಿಯ ನಾಗರಿಕರು ಬೂಸ್ಟರ್‌ ಡೋಸ್ ಪಡೆಯಲು ಅರ್ಹರು.

* ಕೋ-ವಿನ್ ಖಾತೆಗಳ ಮೂಲಕ ಅರ್ಹರು ಬೂಸ್ಟರ್‌ ಡೋಸ್‌ ಪಡೆಯಲು ನೋಂದಾಯಿತರಾಗಬಹುದು.

* ಕೋ-ವಿನ್ ಬೆಂಬಲಿತ ನೋಂದಣಿ ಪ್ರಕ್ರಿಯೆ ಮೂಲಕ ಫಲಾನುಭವಿಗಳು ಮುಂಗಡವಾಗಿ ನೋಂದಣಿಯಾಗಬಹುದು.

* 2ನೇ ಚುಚ್ಚುಮದ್ದು ತೆಗೆದುಕೊಂಡ ದಿನಾಂಕದ ಆಧಾರದ ಮೇಲೆ ಫಲಾನುಭವಿಗಳ ಅರ್ಹತೆಯನ್ನು ನಿರ್ಧರಿಸಲಾಗುವುದು.

ಕೊರೋನಾ ಸೋಂಕಿಗೆ ನ್ಯೂಟನ್‌ ನಂತರದ 4 ನೇ ನಿಯಮ ಅಳವಡಿಸಿದ ಚಾಲಾಕಿ ಬಾಲಕ

ಆಧಾರ್‌ ಮೂಲಕ ಗುರುತಿನ ಖಾತ್ರಿ ಮಾಡಲಾಗುವುದು. ಆಧಾರ್‌ ಹೊರತು ಪಡಿಸಿ, ಕೇಂದ್ರ ಕುಟುಂಬ ಮತ್ತು ಆರೋಗ್ಯ ಇಲಾಖೆ ಅನುಮೋದಿಸಿದ ಈ ಗುರುತಿನ ಸಾಕ್ಷ್ಯಗಳಿಗೆ ಮನ್ನಣೆ ಇದೆ:

1. ಇಪಿಐಸಿ

2. ಪಾಸ್ಪೋರ್ಟ್

3.ಚಾಲನಾ ಪರವಾನಿಗೆ

4. ಪಾನ್ ಕಾರ್ಡ್

5. ಆರ್‌ಜಿಐ ಅಥವಾ ಎನ್‌ಪಿಆರ್‌ ವಿತರಿಸಿದ ಸ್ಮಾರ್ಟ್ ಕಾರ್ಡ್

6. ಭಾವಚಿತ್ರವಿರುವ ಪಿಂಚಣಿ ದಾಖಲೆ

ಮುನ್ನೆಚ್ಚರಿಕಾ ಬೂಸ್ಟರ್‌ ಲಸಿಕೆ ನೀಡಲು ಸಮಯ ಸನಿಹಿತವಾದಾಗ ಕೋ-ವಿನ್ ವ್ಯವಸ್ಥೆಯು ಫಲಾನುಭವಿಗಳಿಗೆ ಎಸ್‌ಎಂಎಸ್‌ ಮೂಲಕ ರಿಮೈಂಡ್ ಮಾಡುತ್ತದೆ.

ನೋಂದಣಿ ಸೇವೆಗಳು ಆನ್ಲೈನ್ ಮತ್ತು ಆಫ್ಲೈನ್ ಎರಡರಲ್ಲೂ ಲಭ್ಯವಿರಲಿವೆ.

ಲಸಿಕಾಕರಣವನ್ನು ರಿಯಲ್ ಟೈಂ ಆಧಾರದಲ್ಲಿ ಕೋ-ವಿನ್ ವ್ಯಾಕ್ಸಿನೇಟರ್‌ ಮಾಡ್ಯೂಲ್ ಮೂಲಕ ಅದೇ ದಿನ ದಾಖಲಿಸಿಕೊಳ್ಳಲಾಗುವುದು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...