ಕಳೆದ 20 ತಿಂಗಳಿನಿಂದ ಕೊರೊನಾ ವಿರುದ್ಧ ಹೋರಾಟ ನಡೆಸುತ್ತಿರುವ ದೇಶವು ನಿನ್ನೆಯಷ್ಟೇ ಹೊಸ ಮೈಲಿಗಲ್ಲನ್ನು ತಲುಪಿದೆ. ದೇಶದಲ್ಲಿ 100 ಕೋಟಿ ಕೋವಿಡ್ ಲಸಿಕೆಯನ್ನು ವಿತರಣೆ ಮಾಡುವ ಮೂಲಕ ಸಾಧನೆಗೈಯಲಾಗಿದೆ. ಇಷ್ಟಾದರೂ ಕೂಡ ಸದ್ಯಕ್ಕಂತೂ ನಮಗೆ ಮಾಸ್ಕ್ ಹಾಗೂ ಸಾಮಾಜಿಕ ಅಂತರಗಳಿಂದ ಮುಕ್ತಿ ಇಲ್ಲ ಎಂದು ಮಹಾರಾಷ್ಟ್ರದ ಟಾಸ್ಕ್ ಫೋರ್ಸ್ ಅಭಿಪ್ರಾಯಪಟ್ಟಿದೆ.
ಪತಿ ಜೊತೆ ನಡೆಸಿದ ಚಾಟ್ ಇನ್ಸ್ಟಾಗೆ ಹಾಕಿ ದಂಡ ತೆತ್ತ ಪತ್ನಿ…..!
ದೇಶದಲ್ಲಿ ಕೊರೊನಾ 2ನೇ ಅಲೆಯು ಭಾಗಶಃ ತನ್ನ ಆರ್ಭಟವನ್ನು ನಿಲ್ಲಿಸಿದೆ. ಆದರೂ ಮೂರನೇ ಅಲೆಯ ಆತಂಕ ಇನ್ನೂ ಜೀವಂತವಾಗಿದೆ. ಸದ್ಯಕ್ಕಂತೂ ಕೊರೊನಾ 3ನೇ ಅಲೆ ಸಂಭವಿಸುವುದಿಲ್ಲ ಎಂದು ಅನೇಕ ಅಧ್ಯಯನಗಳು ಹೇಳಿದ್ದರೂ ಸಹ ದೀಪಾವಳಿ ಬಳಿಕ ಸೋಂಕಿನ ಸಂಖ್ಯೆಯಲ್ಲಿ ಹೆಚ್ಚಳವಾಗಲಿದೆ ಎಂದು ನಿರೀಕ್ಷಿಸಲಾಗಿದೆ.
ʼಐಪಿಒʼ ಮೂಲಕ ಹಣ ಗಳಿಸಲು ಇಲ್ಲಿದೆ ಸುವರ್ಣಾವಕಾಶ
ಡೇಲ್ಟಾ ರೂಪಾಂತರಿಯ ಬಳಿಕ ಸದ್ಯ ಯಾವುದೇ ಹೊಸ ರೂಪಾಂತರಿಗಳು ಪತ್ತೆಯಾಗಿಲ್ಲ. ಕೊರೊನಾದ ಮಾರ್ಗಸೂಚಿಗಳನ್ನು ಪ್ರತಿಯೊಬ್ಬರೂ ಕಟ್ಟುನಿಟ್ಟಾಗಿ ಪಾಲಿಸಿದಲ್ಲಿ ಕೊರೊನಾ ಮೂರನೇ ಅಲೆಯನ್ನು ಅನಾಯಾಸವಾಗಿ ತಡೆಯಬಹುದಾಗಿದೆ. ಮಹಾರಾಷ್ಟ್ರದಲ್ಲಂತೂ ಪ್ರತಿನಿತ್ಯ 1.5 ಲಕ್ಷ ಟೆಸ್ಟ್ ಮಾಡಿಸಲಾಗ್ತಿದೆ. ಇದೇ ಕಾರಣದಿಂದಲೇ ಕಳೆದ ಮೂರ್ನಾಲ್ಕು ತಿಂಗಳಿನಿಂದ ಸೋಂಕಿನ ಸಂಖ್ಯೆಯು ಇಳಿಕೆ ಕಂಡಿದೆ ಎಂದು ಟಾಸ್ಕ್ ಫೋರ್ಸ್ ಹೇಳಿದೆ.
ಕೋವಿಡ್ ಲಸಿಕೆಯು ಕೊರೊನಾ ವಿರುದ್ಧದ ಹೋರಾಟದಲ್ಲಿ ಪ್ರಮುಖ ಅಸ್ತ್ರವಾಗಿದೆ. ಆದರೆ ಕೊರೊನಾ ಲಸಿಕೆ ಬಳಿಕವೂ ಕನಿಷ್ಟ ಇನ್ನೊಂದು ವರ್ಷವಾದರೂ ಮಾಸ್ಕ್ ಹಾಗೂ ಸಾಮಾಜಿಕ ಅಂತರ ಸೇರಿದಂತೆ ಕೋವಿಡ್ ಮಾರ್ಗಸೂಚಿಗಳು ಕಡ್ಡಾಯವಾಗಿ ಪಾಲಿಸಲೇಬೇಕು. ಹಾಗಿದ್ದಲ್ಲಿ ಮಾತ್ರ ಕೊರೊನಾ ಸೋಂಕಿನಿಂದ ಬಚಾವಾಗಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.