alex Certify ಕೊರೊನಾ ಲಸಿಕೆ ಲಭ್ಯತೆ ಪ್ರಮಾಣ ಆಧರಿಸಿ ಆದ್ಯತೆಯ ಪಟ್ಟಿ ಪರಿಷ್ಕರಣೆ : ಕೇಂದ್ರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ಲಸಿಕೆ ಲಭ್ಯತೆ ಪ್ರಮಾಣ ಆಧರಿಸಿ ಆದ್ಯತೆಯ ಪಟ್ಟಿ ಪರಿಷ್ಕರಣೆ : ಕೇಂದ್ರ

ದೇಶದ ಜನಸಂಖ್ಯೆ, ದಾಸ್ತಾನು ನಿರ್ವಹಣೆ, ಕೊರೊನಾ ಲಸಿಕೆ ಆಯ್ಕೆ, ಕೊರೊನಾ ಲಸಿಕೆ ನಿರ್ವಹಣೆಗಳ ಬಗ್ಗೆ ನಿಗಾ ಇರಿಸಲು ಕೇಂದ್ರ ಸರ್ಕಾರ ರಾಷ್ಟ್ರೀಯ ತಜ್ಞರ ಗುಂಪನ್ನ ಆಗಸ್ಟ್ ತಿಂಗಳಲ್ಲೇ ನಿರ್ಮಿಸಿದೆ ಅಂತಾ ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್​ ಭೂಷಣ್​ ಹೇಳಿದ್ದಾರೆ. ಈ ಗುಂಪು ಕೊರೊನಾ ಲಸಿಕೆ ಕುರಿತಾದ ಸಂಪೂರ್ಣ ಜವಾಬ್ದಾರಿ ಹೊರಲಿದೆ.

ಆದ್ಯತೆಯ ಮೇರೆಗೆ ಕೊರೊನಾ ಲಸಿಕೆಗಳನ್ನ ಹಂಚುವ ಸಲುವಾಗಿ ಈ ತಂಡ ಆದ್ಯತೆಯ ತಂಡವನ್ನ ರಚಿಸಿದೆ. ಈ ತಂಡದ ಸದಸ್ಯರು ನೀಡಿದ ಸಲಹೆ ಆಧಾರದ ಮೇಲೆ ಮೊದಲು ಆರೋಗ್ಯ ಕಾರ್ಯಕರ್ತರಿಗೆ, 2ನೆಯದಾಗಿ ಪೊಲೀಸರು ಹಾಗೂ ಪೌರ ಕಾರ್ಮಿಕರು ಸೇರಿದಂತೆ ಮುಂಚೂಣಿ ಕೆಲಸಗಾರರಿಗೆ , ಮೂರನೆಯ ಆದ್ಯತೆಯ ಮೇರೆಗೆ 50 ವರ್ಷ ಮೇಲ್ಪಟ್ಟ ಸುಮಾರು 27 ಕೋಟಿ ಜನರಿಗೆ ಆದ್ಯತೆಯನ್ನ ನೀಡಲಾಗಿದೆ. ಲಸಿಕೆಯ ಲಭ್ಯತೆ ಪ್ರಮಾಣವನ್ನ ಆಧರಿಸಿ ಈ ಆದ್ಯತೆಯ ಪಟ್ಟಿ ಪರಿಷ್ಕರಣೆ ಆಗಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...