ಕೋವಿಡ್-19 ಬಳಿಕ ಪ್ರತಿಯೊಂದು ದೇಶವೂ ಅಂತರಾಷ್ಟ್ರೀಯ ಪ್ರಯಾಣ ಮಾಡುವವರಿಗೆ ಟ್ರಾವೆಲ್ ಅಡ್ವೈಸರಿಯನ್ನು ನೀಡುತ್ತಿದೆ. ಯಾವ ದೇಶಕ್ಕೆ ಭೇಟಿ ಕೊಡುವುದು ಸೂಕ್ತವಲ್ಲ ಎಂಬ ಎಚ್ಚರಿಕೆಯನ್ನೂ ಪ್ರಯಾಣಿಕರಿಗೆ ನೀಡುತ್ತಿವೆ. ತಮ್ಮ ದೇಶವನ್ನು ಕೋವಿಡ್‌ನಿಂದ ರಕ್ಷಿಸಿಕೊಳ್ಳಲು ಇಂಥದ್ದೊಂದು ನಿರ್ಬಂಧಗಳನ್ನು ಹಾಕಿಕೊಳ್ಳುತ್ತಿವೆ.
ಇದೀಗ ಯುನೈಟೆಡ್ ಸ್ಟೇಟ್ಸ್ ಭಾರತಕ್ಕಾಗಿ ತನ್ನ ಪ್ರಯಾಣ ಸಲಹೆಯನ್ನು (ಟ್ರಾವೆಲ್ ಅಡ್ವೈಸರಿ) ಪರಿಷ್ಕರಿಸಿದ್ದು ತನ್ನ ಪ್ರಯಾಣಿಕರಿಗೆ ಎಚ್ಚರಿಕೆಯುತ ಸಲಹೆ ನೀಡಿದೆ. ಕೋವಿಡ್ ಪೀಡಿತ ದೇಶಕ್ಕೆ ಪ್ರಯಾಣವನ್ನು ಮರು ಪರಿಶೀಲಿಸುವಂತೆ ಅದು ತನ್ನ ನಾಗರಿಕರನ್ನು ಒತ್ತಾಯಿಸಿದೆ.
ಶಾಸಕ ಮಹೇಶ್ ಹೆಸರಲ್ಲಿ ಶಾಸಕಿ ರೂಪಾಲಿ ನಾಯ್ಕ್ ಗೆ ವಂಚನೆ: ಅರೆಸ್ಟ್
ಯಾವುದೇ ಅಂತರರಾಷ್ಟ್ರೀಯ ಪ್ರಯಾಣವನ್ನು ಯೋಜಿಸುವ ಮೊದಲು ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್‌ನ (ಸಿಡಿಸಿ) ಲಸಿಕೆ ಕುರಿತ ನಿರ್ದಿಷ್ಟ ಶಿಫಾರಸುಗಳನ್ನು ಪರಿಶೀಲಿಸಿ ಎಂದು ಸಲಹೆ ನೀಡಲಾಗಿದೆ.
ಅಮೆರಿಕಾವು ಪ್ರಯಾಣ ವಿಚಾರದಲ್ಲಿ ಲೆವೆಲ್‌ಗಳನ್ನು (ವರ್ಗೀಕರಣ) ಗುರುತು ಮಾಡಿದೆ. ನಾಲ್ಕನೇ ಲೆವೆಲ್ ನಲ್ಲಿರುವ ದೇಶಗಳಿಗೆ ಪ್ರಯಾಣ ಕೂಡದು ಮತ್ತು ಮೂರನೇ ಲೆವೆಲ್‌ನಲ್ಲಿ ಗುರುತಿಸಲಾದ ದೇಶಗಳಿಗೆ ಪ್ರಯಾಣಿಕರು ಮರು ಪರಿಶೀಲಿಸಬೇಕೆಂಬ ಸಲಹೆ ಇರುತ್ತದೆ.
ಮಟ್ಟ 3 ಎಂದು ವರ್ಗೀಕರಿಸಲಾದ ಸ್ಥಳಗಳಿಗೆ ಜನರು ಪ್ರಯಾಣವನ್ನು ಮರುಪರಿಶೀಲಿಸುವಂತೆ ಸಿ.ಡಿ.ಸಿ. ಸೂಚಿಸುವ ಜತೆಗೆ ಜನರು ಅಲ್ಲಿಗೆ ಪ್ರಯಾಣಿಸಿದರೆ, ಅವರು ಹೋಗುವ ಮೊದಲು ಸಂಪೂರ್ಣವಾಗಿ ಲಸಿಕೆ ನೀಡಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳಲಾಗುತ್ತದೆ. ಅಮೆರಿಕಾವು ಭಾರತವನ್ನು ಈಗ ಮೂರನೇ ಲೆವೆಲ್ ಪಟ್ಟಿಯಲ್ಲಿ ಸೇರಿಸಿದೆ.