alex Certify ದೇಶದಲ್ಲಿ ಶುರುವಾಗಿದೆ ಕೊರೊನಾ ಮೂರನೇ ಅಲೆ…..? 2 ದಿನದಲ್ಲಿ ಹೆಚ್ಚಾಯ್ತು ಇಷ್ಟೊಂದು ಕೇಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದೇಶದಲ್ಲಿ ಶುರುವಾಗಿದೆ ಕೊರೊನಾ ಮೂರನೇ ಅಲೆ…..? 2 ದಿನದಲ್ಲಿ ಹೆಚ್ಚಾಯ್ತು ಇಷ್ಟೊಂದು ಕೇಸ್

ಭಾರತದಲ್ಲಿ ಕೊರೊನಾ ವೈರಸ್ ಬಿಕ್ಕಟ್ಟು ಮತ್ತೊಮ್ಮೆ ಶುರುವಾಗ್ತಿದೆ. ಕಳೆದ 2 ದಿನಗಳಲ್ಲಿ ಹೊಸ ಪ್ರಕರಣಗಳಲ್ಲಿ ಏರಿಕೆ ಕಂಡು ಬಂದಿದೆ. ಎರಡು ದಿನಗಳಲ್ಲಿ 21 ಸಾವಿರಕ್ಕೂ ಹೆಚ್ಚು ಹೊಸ ಪ್ರಕರಣ ದಾಖಲಾಗಿದೆ. ಕಳೆದ 24 ಗಂಟೆಗಳಲ್ಲಿ, ದೇಶದಲ್ಲಿ 46397 ಹೊಸ ಕೋವಿಡ್ -19 ಪ್ರಕರಣಗಳು ವರದಿಯಾಗಿವೆ.

ವರ್ಲ್ಡ್‌ಮೀಟರ್‌ನ ಮಾಹಿತಿಯ ಪ್ರಕಾರ, ಕಳೆದ 24 ಗಂಟೆಗಳಲ್ಲಿ, ದೇಶಾದ್ಯಂತ 46397 ಹೊಸ ಕೊರೊನಾ ವೈರಸ್ ಪ್ರಕರಣಗಳು ವರದಿಯಾಗಿದೆ.  ಕೊರೊನಾದಿಂದ 608 ಜನರು ಸಾವನ್ನಪ್ಪಿದ್ದಾರೆ. ಇದರ ನಂತ್ರ  ದೇಶದಲ್ಲಿ ಸೋಂಕಿತರ ಸಂಖ್ಯೆ 3 ಕೋಟಿ 25 ಲಕ್ಷ 57 ಸಾವಿರದ 767 ಕ್ಕೆ ಏರಿದೆ. ಕೊರೊನಾದಿಂದ ಗುಣಮುಖರಾದವರ ಸಂಖ್ಯೆ 3 ಕೋಟಿ 17 ಲಕ್ಷ 81 ಸಾವಿರದ 46 ಕ್ಕೆ ಏರಿದೆ.

ಕಳೆದ 2 ದಿನಗಳಲ್ಲಿ, ಭಾರತದಲ್ಲಿ ಕೋವಿಡ್ -19 ಪ್ರಕರಣಗಳು ಹೆಚ್ಚಾಗಿದೆ. ಹೊಸ ಪ್ರಕರಣಗಳು ಬಹುತೇಕ ದ್ವಿಗುಣಗೊಂಡಿವೆ. ಭಾರತದಲ್ಲಿ, ಆಗಸ್ಟ್ 24 ರಂದು ದೇಶಾದ್ಯಂತ 25467 ಹೊಸ ಪ್ರಕರಣಗಳನ್ನು ದಾಖಲಿಸಲಾಗಿದೆ.

ಕೇರಳದಲ್ಲಿ ಹೆಚ್ಚುತ್ತಿರುವ ಸೋಂಕಿನ ವೇಗವು ಮೂರನೇ ಅಲೆ ಭಯವನ್ನು ಹೆಚ್ಚಿಸಿದೆ. ಕೇರಳದಲ್ಲಿ ಅತಿ ಹೆಚ್ಚು ಪ್ರಕರಣಗಳು ವರದಿಯಾಗಿವೆ. 24 ಗಂಟೆಗಳಲ್ಲಿ 31445 ಹೊಸ ಪ್ರಕರಣಗಳು ವರದಿಯಾಗಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...