ವಿಶ್ವ ರ್ಯಾಂಕಿಂಗ್ ಪಟ್ಟಿಯಲ್ಲಿ 3ನೇ ಸ್ಥಾನ ಅಲಂಕರಿಸಿರುವ ಸ್ಟಿಫಾನೊಸ್ ಸಿತ್ಸಿಪಾಸ್ ಅವರು ಕೊರೊನಾ ತಡೆ ಲಸಿಕೆಯನ್ನು ಪಡೆಯಲು ಹಿಂಜರಿಕೆ ವ್ಯಕ್ತಪಡಿಸಿದ್ದಾರೆ.
ನನಗೆ ಯಾರು ಕೂಡ ಏನೂ ಹೇಳಿಲ್ಲ. ಲಸಿಕೆಯು ಕಡ್ಡಾಯವಾಗಿಲ್ಲ. ನಾನು ಟೆನ್ನಿಸ್ ಅಂಗಳಕ್ಕೆ ಇಳಿಯಲು ಲಸಿಕೆ ಕಡ್ಡಾಯ ಎಂದು ನಿಯಮ ಜಾರಿಯಾದಾಗ ಮಾತ್ರವೇ ಲಸಿಕೆ ಬಗ್ಗೆ ಆಲೋಚಿಸುವೆ ಎಂದು ಅವರು ಸಿನ್‍ಸಿನ್ನಾಟಿಯಲ್ಲಿನ ಟೂರ್ನಮೆಂಟ್‍ನಲ್ಲಿ ಹೇಳಿದ್ದಾರೆ.
ಕಿಟಕಿ ಮೂಲಕ ಕೋವಿಡ್ ಲಸಿಕೆ ಪಡೆದ ಭೂಪ….!
ಈಗಾಗಲೇ ಎಟಿಪಿ ಟೂರ್ ಮೂಲಕ ಸಾರ್ವಜನಿಕವಾಗಿ ಟೆನ್ನಿಸ್ ಪಟುಗಳು ಕೊರೊನಾ ನಿಯಂತ್ರಣ ಲಸಿಕೆಯನ್ನು ಪಡೆಯುವಂತೆ ಉತ್ತೇಜಿಸಲಾಗುತ್ತಿದೆ. ಆದರೆ, ಗ್ರೀಸ್ ಮೂಲದ 23 ವರ್ಷದ ಸ್ಟಿಫಾನೊಸ್ ಮಾತ್ರ ಇದನ್ನು ಕಿವಿ ಮೇಲೆ ಹಾಕಿಕೊಂಡಿಲ್ಲ.
ಕಳೆದ ಜೂನ್‍ನಲ್ಲಿ ಫ್ರೆಂಚ್ ಓಪನ್‍ನಲ್ಲಿ ಫೈನಲ್ ಪ್ರವೇಶಿಸಿದ್ದ ಸ್ಟಿಫಾನೊಸ್, ಬಳಿಕ ವಿಂಬಲ್ಡನ್‍ನಲ್ಲಿ ಮೊದಲ ಸುತ್ತಿನಲ್ಲೇ ಹೊರಬಿದ್ದಿದ್ದರು. ಕೊರೊನಾ ಬಬಲ್ ನಲ್ಲಿ ಇದ್ದುಕೊಂಡು ಟೆನ್ನಿಸ್ ಆಟದ ಮೇಲೆ ಏಕಾಗ್ರತೆ ಸಾಧಿಸುವುದು ಕಷ್ಟವಾಗುತ್ತಿದೆ ಎಂದು ಅವರು ವರದಿಗಾರರಿಗೆ ಹೇಳಿದ್ದರು.