ಕೊರೊನಾ ಮೂರನೇ ಅಲೆ ಭಯ ಭಾರತದಲ್ಲಿ ಶುರುವಾಗಿದೆ. ಮಕ್ಕಳ ಮೇಲೆ ಮೂರನೇ ಅಲೆ ಹೆಚ್ಚು ಪ್ರಭಾವ ಬೀರಲಿದೆ ಎಂಬ ಕಾರಣಕ್ಕೆ ಆದಷ್ಟು ಬೇಗ ಮಕ್ಕಳಿಗೆ ಲಸಿಕೆ ತರುವ ತಯಾರಿಯಲ್ಲಿ ಭಾರತವಿದೆ. ಭಾರತದಲ್ಲಿ ಸೆಪ್ಟೆಂಬರ್ ವೇಳೆಗೆ ಕೊರೊನಾ ಲಸಿಕೆ ಬರುವ ಸಾಧ್ಯತೆಯಿದೆ. ಈ ಮಧ್ಯೆ ಇಂಡೋನೇಷ್ಯಾದಲ್ಲಿ ಕೊರೊನಾ ಮೂರನೇ ಅಲೆ ಅಬ್ಬರಿಸಲು ಶುರುವಾಗಿದೆ.
ಇಂಡೋನೇಷ್ಯಾದಲ್ಲಿ, ಕಳೆದ ಒಂದು ವಾರದಲ್ಲಿ ಕೊರೊನಾ ಸೋಂಕಿಗೆ 100 ಕ್ಕೂ ಹೆಚ್ಚು ಮಕ್ಕಳು ಸಾವನ್ನಪ್ಪಿದ್ದಾರೆ. ಸಾವನ್ನಪ್ಪಿದ ಅನೇಕ ಮಕ್ಕಳ ವಯಸ್ಸು ಐದು ವರ್ಷಕ್ಕಿಂತ ಕಡಿಮೆ ಎನ್ನಲಾಗಿದೆ. ಇಂಡೋನೇಷ್ಯಾದಲ್ಲಿ ಮಕ್ಕಳ ಮರಣ ಪ್ರಮಾಣ ಹೆಚ್ಚಿದೆ. ಕೊರೊನಾ ಮಕ್ಕಳ ಮೇಲೆ ಹೆಚ್ಚು ಪ್ರಭಾವ ಬೀರುವುದಿಲ್ಲವೆಂದಿದ್ದವರಿಗೆ ಈಗ ಕೊರೊನಾ ಸವಾಲೊಡ್ಡಿದೆ.
ಕೊರೊನಾ ಮೂರನೇ ಅಲೆಗೂ ಮುನ್ನ ಇಂಡೋನೇಷ್ಯಾ ಸರ್ಕಾರ ಯಾವುದೇ ಕ್ರಮಕೈಗೊಂಡಿಲ್ಲ. ಇದ್ರಿಂದಾಗಿ ಮಕ್ಕಳ ಸಾವಿನ ಸಂಖ್ಯೆ ಹೆಚ್ಚಾಗಿದೆ ಎಂದು ಅಲ್ಲಿನ ಜನರು ಸರ್ಕಾರದ ಮೇಲೆ ಆರೋಪ ಮಾಡ್ತಿದ್ದಾರೆ. ಆಗ್ನೇಯ ಏಷ್ಯಾದಲ್ಲೂ ಮಕ್ಕಳ ಸಾವಿನ ಪ್ರಕರಣ ಹೆಚ್ಚಾಗ್ತಿದೆ. ಇದಕ್ಕೆ ಡೆಲ್ಟಾ ರೂಪಾಂತರ ಕಾರಣ ಎನ್ನಲಾಗ್ತಿದೆ. ಅಲ್ಲಿ ಮಕ್ಕಳ ಲಸಿಕೆ ಅಭಿಯಾನ ನಿಧಾನವಾಗಿ ನಡೆಯುತ್ತಿರುವುದೂ ಒಂದು ಕಾರಣ ಎನ್ನಲಾಗ್ತಿದೆ.