alex Certify ಶಾಕಿಂಗ್​: ಕೊರೊನಾ ಸೋಂಕಿತರಲ್ಲಿ ಪತ್ತೆಯಾಯ್ತು ಹೊಸ ಲಕ್ಷಣ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಾಕಿಂಗ್​: ಕೊರೊನಾ ಸೋಂಕಿತರಲ್ಲಿ ಪತ್ತೆಯಾಯ್ತು ಹೊಸ ಲಕ್ಷಣ….!

ಕೋವಿಡ್​ ಸೋಂಕಿನ ಬಳಿಕ ಕೈ ಹಾಗೂ ಕಾಲುಗಳು ಕೆಂಪಾಗುವುದು ಹಾಗೂ ಉರಿಯೂತ ಸಂಭವಿಸುವುದು ಕೊರೊನಾದ ಅಡ್ಡಪರಿಣಾಮಗಳಲ್ಲಿ ಒಂದಾಗಿದ್ದಿರಬಹುದು ಎಂದು ಬ್ರಿಟಿಷ್​ ಜರ್ನಲ್​ ಆಫ್​ ಡರ್ಮಟಾಲಜಿಯಲ್ಲಿ ಪ್ರಕಟವಾದ ಹೊಸ ಅಧ್ಯಯನವೊಂದರಲ್ಲಿ ಬಯಲಾಗಿದೆ.

ಚರ್ಮದ ಪರಿಸ್ಥಿತಿಯ ಬಗ್ಗೆ ಅಧ್ಯಯನ ನಡೆಸುತ್ತಿದ್ದ ತಜ್ಞರ ಗುಂಪು ಇದು ಕೊರೊನಾ ವೈರಸ್​ಗೆ ಮನುಷ್ಯನ ರೋಗನಿರೋಧಕ ಶಕ್ತಿ ನೀಡುವ ಪ್ರತಿಕ್ರಿಯೆ ಆಗಿರಬಹುದು ಎಂದು ಹೇಳಿದ್ದಾರೆ. ಸೋಂಕಿಗೆ ಒಳಪಟ್ಟ 1 ರಿಂದ ನಾಲ್ಕನೇ ವಾರದೊಳಗಾಗಿ ಈ ಲಕ್ಷಣಗಳು ಕಾಣಿಸಿಕೊಳ್ಳುತ್ತಿದೆ. ಇದು ಕೈ ಹಾಗೂ ಕಾಲ್ಬೆರಳು ಊದಿಕೊಳ್ಳುವುದು ಅಥವಾ ಕೆಂಪು ಬಣ್ಣಕ್ಕೆ ತಿರುಗುವುದಕ್ಕೆ ಕಾರಣವಾಗಿದೆ ಎಂದು ಅಧ್ಯಯನ ಹೇಳಿದೆ.

ಬಿಜೆಪಿಯಿಂದ ಅಚ್ಚರಿ ನಿರ್ಧಾರ, ಉದಾಸಿ ಕುಟುಂಬಕ್ಕೆ ಬಿಗ್ ಶಾಕ್ – ಬೈಎಲೆಕ್ಷನ್ ನಲ್ಲಿ ಹೊಸ ಪ್ರಯೋಗಕ್ಕಿಳಿದ ಹೈಕಮಾಂಡ್

ಹೆಚ್ಚಿನ ಪ್ರಕರಣಗಳಲ್ಲಿ ಈ ರೀತಿಯ ಲಕ್ಷಣವು ಸೋಂಕು ತಗುಲಿದ ಕೆಲವು ದಿನಗಳ ಬಳಿಕ ಕಾಣಿಸಿಕೊಳ್ಳುತ್ತದೆ. ಕೆಲವು ಪ್ರಕರಣದಲ್ಲಿ ಈ ಲಕ್ಷಣವು ಕೆಲವು ತಿಂಗಳುಗಳವರೆಗೆ ಮುಂದುವರಿಯಬಹುದು.

ಮನುಷ್ಯನ ದೇಹವು ಕೊರೊನಾ ಸೋಂಕಿಗೆ ಒಳಗಾದಾಗ ಈ ರೀತಿಯ ಲಕ್ಷಣ ಕಾಣಿಸಿಕೊಳ್ಳಲು ತಜ್ಞರು 2 ಕಾರಣಗಳನ್ನು ಪತ್ತೆ ಹೆಚ್ಚಿದ್ದಾರೆ. ಮೊದಲನೆಯದಾಗಿ ಆ್ಯಂಟಿ ವೈರಲ್​ ಪ್ರೋಟಿನ್​​ ಇದನ್ನು ಟೈಪ್​ 1 ಇಂಟರ್​ ಫೆರಾನ್​ ಎಂದು ಕರೆಯಲಾಗುತ್ತದೆ. ಇನ್ನೊಂದು ಪ್ರಕರಣದಲ್ಲಿ ಆ್ಯಂಟಿಬಾಡಿಗಳು ತಪ್ಪಾಗಿ ತಮ್ಮದೇ ದೇಹದ ಜೀವಕೋಶಗಳ ವಿರುದ್ಧ ಹೋರಾಡಲು ಆರಂಭಿಸುತ್ತವೆ. ಅಲ್ಲದೇ ವೈರಸ್​ ಕೂಡ ಇದಕ್ಕೆ ಕಾರಣವಾಗಿರಬಹುದು ಎಂದು ಅಂದಾಜಿಸಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...