ಕೋವಿಡ್ ಕಾರಣದಿಂದಾಗಿ ಈ ವರ್ಷದ ಹಜ್ ಯಾತ್ರೆಗೆ ಕೇವಲ 60,000 ಮಂದಿಗೆ ಮಾತ್ರವೇ ಅವಕಾಶ ನೀಡುವುದಾಗಿ ಸೌದಿ ಅರೇಬಿಯಾ ತಿಳಿಸಿದ್ದು, ಇವರಲ್ಲಿ ಎಲ್ಲರೂ ತನ್ನ ಗಡಿಯೊಳಗಿನ ಮಂದಿಯೇ ಆಗಿರಲಿದ್ದಾರೆ ಎಂದು ತಿಳಿಸಿದೆ.
ಸೌದಿ ಪ್ರೆಸ್ ಏಜೆನ್ಸಿ ಮುಖಾಂತರ ಈ ಘೋಷಣೆ ಪ್ರಕಟಿಸಿದ ಸೌದಿ ರಾಜಮನೆತನ, ಈ ಸಂಬಂಧ ತನ್ನ ಹಜ್ ಮತ್ತು ಉಮ್ರಾಹ್ ಸಚಿವಾಲಯ ನಿರ್ಣಯ ತೆಗೆದುಕೊಂಡಿದೆ ಎಂದು ತಿಳಿಸಿದೆ.
ನಿಮ್ಮ ಮನ ಮುದಗೊಳಿಸುತ್ತೆ ಪುಟ್ಟ ಬಾಲಕನ ಸುಂದರ ವಿಡಿಯೋ
ಇದೇ ಸಾಂಕ್ರಮಿಕದ ಕಾರಣದಿಂದ ಕಳೆದ ವರ್ಷವೂ ಸೌದಿಯಲ್ಲೇ ನೆಲೆಸಿರುವ 1000ದಷ್ಟು ಮಂದಿ ಮಾತ್ರವೇ ಹಜ್ ಯಾತ್ರೆ ಮಾಡಿದ್ದರು. ಈ ವರ್ಷದ ಹಜ್ ಯಾತ್ರೆಯು ಜುಲೈ ಮಧ್ಯಭಾಗದಿಂದ ಆರಂಭಗೊಳ್ಳಲಿದೆ.