alex Certify ಕೋವಿಡ್-19: ಲಾಕ್‌ಡೌನ್‌ನತ್ತ ಸಾಗುತ್ತಿದೆಯೇ ರಾಷ್ಟ್ರ ರಾಜಧಾನಿ…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೋವಿಡ್-19: ಲಾಕ್‌ಡೌನ್‌ನತ್ತ ಸಾಗುತ್ತಿದೆಯೇ ರಾಷ್ಟ್ರ ರಾಜಧಾನಿ…?

ಕೋವಿಡ್-19ನ ಸೋಂಕುಗಳ ಹೆಚ್ಚಳದಲ್ಲಿ ತೀವ್ರಗತಿಯ ಏರಿಕೆ ಕಾಣುತ್ತಿರುವ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸೋಮವಾರ ಹೊಸದಾಗಿ 4,099 ಕೇಸುಗಳು ದಾಖಲಾಗಿವೆ ಎಂದು ಸರ್ಕಾರಿ ಅಂಕಿಅಂಶಗಳು ತಿಳಿಸುತ್ತಿವೆ.

ಭಾನುವಾರದ ಅಂಕಿಅಂಶಗಳಿಗೆ ಹೋಲಿಸಿದರೆ, ಸೋಮವಾರದ ಸೋಂಕುಪೀಡಿತರ ಸಂಖ್ಯೆಯಲ್ಲಿ 28% ಹೆಚ್ಚಳ ಕಂಡು ಬಂದಿದೆ. ಸೋಮವಾರ ಕೋವಿಡ್‌ನಿಂದಾಗಿ ಒಬ್ಬ ವ್ಯಕ್ತಿ ಪ್ರಾಣ ಕಳೆದುಕೊಂಡಿದ್ದಾರೆ. ತನ್ಮೂಲಕ ಈ ತಿಂಗಳಲ್ಲಿ ಅದಾಗಲೇ ಸೋಂಕಿಗೆ ಮೂವರು ಬಲಿಯಾಗಿದ್ದಾರೆ.

coronavirus:ಯೂರೋಪ್ ನಲ್ಲಿ ಹೆಚ್ಚಾದ ಒಮಿಕ್ರಾನ್ ಭೀತಿ, ಅಮೇರಿಕಾವನ್ನೆ ಗೊಂದಲಕ್ಕೆ ತಳ್ಳಿದ ಹೊಸ ವೈರಸ್

ಪಾಸಿಟಿವಿ ದರವೂ ಭಾನುವಾರ 3.64% ಇದ್ದಿದ್ದು ಸೋಮವಾರ 6.46 ಪ್ರತಿಶತಕ್ಕೆ ಜಿಗಿದಿದೆ. 5%ಗಿಂತ ಹೆಚ್ಚಿನ ದರದಲ್ಲಿ ಪಾಸಿಟಿವಿಟಿ ಕಂಡುಬಂದಿರುವ ಕಾರಣ ಹಂತ-2ರ ಅಲರ್ಟ್ ಜಾರಿಗೆ ತರಬೇಕಾದ ಪರಿಸ್ಥಿತಿ ರಾಜಧಾನಿಯಲ್ಲಿ ನೆಲೆಸಿದೆ.

ಈ ಮಟ್ಟದ ಅಲರ್ಟ್‌ನಲ್ಲಿ ರೆಸ್ಟೋರೆಂಟ್‌ಗಳು ಮತ್ತು ಬಾರುಗಳು ಮುಚ್ಚಿರಲಿವೆ. ಆದರೆ ಹೋಂ ಡೆಲಿವರಿ ಲಭ್ಯವಿದ್ದು, ಬೆಳಿಗ್ಗೆ 9ರಿಂದ ಸಂಜೆ 5ರವರೆಗೂ 50% ಸಾಮರ್ಥ್ಯದಲ್ಲಿ ಕೆಲಸ ಮಾಡಲು ಕಚೇರಿಗಳಿಗೆ ಅವಕಾಶ ಇರಲಿದೆ.

ಇದೇ ಪರಿಸ್ಥಿತಿ ಆಟೋರಿಕ್ಷಾಗಳು, ಬಸ್ಸುಗಳು ಹಾಗೂ ಇತರೆ ಮೂಲದ ಸಾರ್ವಜನಿಕ ಸಾರಿಗೆ ವ್ಯವಸ್ಥೆಗಳಿಗೂ ಅನ್ವಯವಾಗುತ್ತದೆ.

ಆದರೆ ಪರಿಸ್ಥಿತಿ ಸದ್ಯದ ಮಟ್ಟಿಗೆ ನಿಯಂತ್ರಣದಲ್ಲಿ ಇದ್ದು, ಈ ಬಾರಿ ಬಹುತೇಕ ಸೋಂಕಿತರಿಗೆ ಆಸ್ಪತ್ರೆ ಸೇರಬೇಕಾದ ಅಗತ್ಯವಿಲ್ಲದಂತಾಗಿದೆ ಎಂದು ದೆಹಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ತಿಳಿಸಿದ್ದು, ಕಠಿಣ ಲಾಕ್‌ಡೌನ್ ಹೇರಬೇಕಾದ ಅಗತ್ಯ ಸದ್ಯಕ್ಕಂತೂ ಇಲ್ಲವೆಂದೇ ಹೇಳಲಾಗುತ್ತಿದೆ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...