alex Certify ತಡರಾತ್ರಿ ಆಸ್ಪತ್ರೆಯಲ್ಲೇ ಲೈಂಗಿಕ ದೌರ್ಜನ್ಯ: ಮಲಗಿದ್ದ ಯುವತಿಗೆ ಕೆಲಸಗಾರನಿಂದ ಕಿರುಕುಳ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತಡರಾತ್ರಿ ಆಸ್ಪತ್ರೆಯಲ್ಲೇ ಲೈಂಗಿಕ ದೌರ್ಜನ್ಯ: ಮಲಗಿದ್ದ ಯುವತಿಗೆ ಕೆಲಸಗಾರನಿಂದ ಕಿರುಕುಳ

ಭೋಪಾಲ್: ಆಸ್ಪತ್ರೆಯಲ್ಲಿಯೇ ಯುವತಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಸೆಹೋರ್ ಜಿಲ್ಲೆಯ ಕೋವಿಡ್ ಪಾಸಿಟಿವ್ ಬಂದಿದ್ದ ಮಹಿಳೆಯನ್ನು ಭೋಪಾಲ್ ಅಶೋಕ ಗಾರ್ಡನ್ ಪ್ರದೇಶದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಹಿಳೆ ಚಿಕಿತ್ಸೆ ಪಡೆಯುವ ಹಿನ್ನೆಲೆಯಲ್ಲಿ 18 ವರ್ಷದ ಮಗಳು ಆಸ್ಪತ್ರೆಯ ವೇಯ್ಟಿಂಗ್ ರೂಮ್ ನಲ್ಲಿದ್ದಳು. ಏಪ್ರಿಲ್ 28 ರಂದು ರಾತ್ರಿ 1 ಗಂಟೆ ವೇಳೆಗೆ ಆಸ್ಪತ್ರೆಯ ಕೆಲಸಗಾರ ಸುನಿಲ್ ಮಲಗಿದ್ದ ಯುವತಿಗೆ ಕಿರುಕುಳ ನೀಡಿದ್ದಾನೆ. ಸ್ವಲ್ಪ ಸಮಯದ ಬಳಿಕ ಮತ್ತೆ ಆತ ಕಿರುಕುಳ ನೀಡಿದ್ದಾನೆ ಎಂದು ಯುವತಿ ದೂರಿದ್ದಾಳೆ.

ತನ್ನ ತಾಯಿಯನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಿದ ಬಳಿಕ ಆಕೆ ಸಿಎಂ ಸಹಾಯವಾಣಿಗೆ ಕರೆ ಮಾಡಿ ದೂರು ದಾಖಲಿಸಿದ್ದಾಳೆ. ನಂತರದಲ್ಲಿ ಘಟನೆ ಬೆಳಕಿಗೆ ಬಂದಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...