
ಒಮಿಕ್ರಾನ್ ಸದ್ಯ ಎಲ್ಲರ ಭಯಕ್ಕೆ ಕಾರಣವಾಗಿದೆ. ಡೆಲ್ಟಾಗಿಂತ ವೇಗವಾಗಿ ಈ ವೈರಸ್ ಹರಡುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ. ಹಾಗಾಗಿ ಸಾಕಷ್ಟು ಎಚ್ಚರಿಕೆ ತೆಗೆದುಕೊಳ್ಳುವ ಅವಶ್ಯಕತೆಯಿದೆ.
ಏನು ಮಾಡಬಾರದು ಎಂಬುದನ್ನು ತಿಳಿಯುವುದಾದ್ರೆ, ಯಾವುದೇ ಸರಿಯಾದ ಮಾಹಿತಿಯಿಲ್ಲದೆ ಅತಿಯಾದ ನಿರ್ಬಂಧ ಹೇರುವ ಅವಶ್ಯಕತೆಯಿಲ್ಲ. ಆರ್ಥಿಕ ಹಾನಿಯುಂಟಾಗುವ ಕ್ರಮ ತೆಗೆದುಕೊಳ್ಳುವ ಅವಶ್ಯಕತೆಯಿಲ್ಲ.
ದೇಶೀಯ ವಿಮಾನ ಪ್ರಯಾಣವನ್ನು ನಿಷೇಧಿಸುವ ಅವಶ್ಯಕತೆಯಿಲ್ಲ. ಕೆಲವು ದೇಶಗಳಿಗೆ ಪ್ರಯಾಣ ನಿರ್ಬಂಧಗಳನ್ನು ವಿಧಿಸುವ ಮೂಲಕ ವೈರಸ್ ಹರಡುವುದನ್ನು ನಿಲ್ಲಿಸಬಹುದು.
ಜನರಿಗೆ ಅವಶ್ಯವಾಗಿರುವ ವಸ್ತು, ಸೇವೆಗಳ ಮಾರಾಟವನ್ನು ರದ್ದು ಮಾಡಬೇಡಿ. ಇದ್ರಿಂದ ಜನರಿಗೆ ತೊಂದರೆಯಾಗುತ್ತದೆ. ಮದ್ಯ ಮಾರಾಟದಂತಹ ಸೇವೆಗಳನ್ನು ರದ್ದು ಮಾಡಿದ್ರೆ ಪೊಲೀಸರು ಕಳ್ಳಸಾಗಣೆ ತಪ್ಪಿಸಲು ಹರಸಾಹಸಪಡಬೇಕಾಗುತ್ತದೆ.
ಅತಿ ಅವಶ್ಯವಿರುವ ಜನರಿಗೆ ಸರಿಯಾದ ಆರೋಗ್ಯ ಸೇವೆ ಒದಗಿಸುವ ಅಗತ್ಯವಿದೆ. 65 ವರ್ಷ ಮೇಲ್ಪಟ್ಟ ಜನರಿಗೆ ಹಾಗೂ ತೀವ್ರ ಅನಾರೋಗ್ಯಕ್ಕೊಳಗಾದವರಿಗೆ ಕೊರೊನಾ ಬೂಸ್ಟರ್ ಡೋಸ್ ನೀಡುವ ಅವಶ್ಯಕತೆಯಿದೆ.
ಒಮಿಕ್ರಾನ್ ನಿಯಂತ್ರಣಕ್ಕೆ ಏನು ಮಾಡಬೇಕು :
ಒಮಿಕ್ರಾನ್ ಎದುರಿಸಲು ಎಲ್ಲ ಸಿದ್ಧತೆ ಮಾಡಿಕೊಳ್ಳಬೇಕು. ಎಲ್ಲ ಸಿದ್ಧತೆಯಾಗಿದೆ ಎಂಬುದು ಕಾಗದದಲ್ಲಿ ಇರದಂತೆ ನೋಡಿಕೊಳ್ಳಬೇಕು.
ಸಾರ್ವಜನಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಜನರಿಗೆ ಕೊರೊನಾ ಎರಡು ಲಸಿಕೆ ಕಡ್ಡಾಯಗೊಳಿಸಬೇಕು. ಸದ್ಯ ಕೊರೊನಾ ಲಸಿಕೆ ತೆಗೆದುಕೊಳ್ಳುವುದು ಐಚ್ಚಿಕವಾಗಿದೆ. ಇದು ಆರೋಗ್ಯದ ಏರುಪೇರಿಗೆ ಕಾರಣವಾಗ್ತಿದೆ.
ಹಿಂದೆ ಮಾಡಿದ ತಪ್ಪುಗಳನ್ನು ಮುಂದೆ ಮಾಡದಂತೆ ಎಚ್ಚರವಹಿಸಿ.
ಜನರು ಗುಂಪು ಸೇರುವುದು ಸೇರಿದಂತೆ ಮಾಸ್ಕ್, ಸಾಮಾಜಿಕ ಅಂತರ, ಸ್ಯಾನಿಟೈಜರ್ ಬಳಕೆಯನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು.