![](https://kannadadunia.com/wp-content/uploads/2021/09/research.png)
ಮೊದಲೇ ಕೋವಿಡ್ ಸೋಂಕಿನಿಂದ ಭಯಗೊಂಡಿರುವ ಜನರಲ್ಲಿ ಇನ್ನಷ್ಟು ಭೀತಿ ಮೂಡುವ ಅನೇಕ ಸಂಗತಿಗಳನ್ನು ಸಂಶೋಧಕರು ಹೊರಹಾಕುತ್ತಲೇ ಇದ್ದಾರೆ.
ಕೋವಿಡ್ ಸೋಂಕಿನಿಂದಾಗಿ ಪುರುಷರಲ್ಲಿ ಲೈಂಗಿಕ ಸಾಮರ್ಥ್ಯ ಕ್ಷೀಣಿಸಲಿದೆ ಎಂದು ಅಮೆರಿಕದ ಮಿಯಾಮಿ ವಿವಿಯ ಸಂಶೋಧಕರ ತಂಡವೊಂದು ತಿಳಿಸಿದೆ. ತಾವು ಅಧ್ಯಯನ ನಡೆಸಿದ ಮಂದಿಯಲ್ಲಿ ಒಬ್ಬರಲ್ಲಿ ಕೋವಿಡ್ ಸೋಂಕಿನಿಂದ ಚೇತರಿಸಿಕೊಂಡಿದ್ದರೂ ಅವರ ವೃಷಣದಲ್ಲಿ ಕೋವಿಡ್-19 ವೈರಸ್ ಇನ್ನೂ ಇದ್ದವು ಎಂದು ತಿಳಿಸಿದ್ದಾರೆ ಸಂಶೋಧಕರು.
ಇದೇ ವೇಳೆ ಇನ್ನೂ ಇಬ್ಬರು ಸೋಂಕಿತರಲ್ಲೂ ಸಹ ಲೈಂಗಿಕ ಸಾಮರ್ಥ್ಯ ಕ್ಷೀಣಿಸಿದ್ದು ಪರೀಕ್ಷೆ ವೇಳೆ ಕಂಡುಬಂದಿದ್ದಾಗಿ ಸಂಶೋಧಕರು ತಿಳಿಸಿದ್ದಾರೆ.
ಸಂಕಷ್ಟದ ನಡುವೆ ಭರ್ಜರಿ ಖುಷಿ ಸುದ್ದಿ…..! ಜೀವನ ಪೂರ್ತಿ ನಿಮ್ಮ ಜೊತೆಗಿರಲಿದೆ ಕೊರೊನಾ ವಿರುದ್ಧ ಹೋರಾಡಿದ ಪ್ರತಿಕಾಯ
ಅಧ್ಯಯನ ಇನ್ನೂ ಆರಂಭಿಕ ಹಂತದಲ್ಲಿದ್ದು, ಕೋವಿಡ್-19 ಸೋಂಕಿನಿಂತ ಮೃತಪಟ್ಟ ಆರು ಮಂದಿಯ ವೃಷಣದ ಸ್ಯಾಂಪಲ್‌ಗಳನ್ನು ಸಂಗ್ರಹಿಸಿದ ಸಂಶೋಧನಾ ತಂಡದ ವರದಿ ಇದಾಗಿದೆ.