alex Certify ಲಾಕ್​ಡೌನ್​ನಿಂದ ಮಹಿಳೆಯರ ಮೇಲೆ ಉಂಟಾಯ್ತು ಋಣಾತ್ಮಕ ಪರಿಣಾಮ: ಅಧ್ಯಯನದಲ್ಲಿ ಬಯಲಾಯ್ತು ಶಾಕಿಂಗ್​ ಮಾಹಿತಿ…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಲಾಕ್​ಡೌನ್​ನಿಂದ ಮಹಿಳೆಯರ ಮೇಲೆ ಉಂಟಾಯ್ತು ಋಣಾತ್ಮಕ ಪರಿಣಾಮ: ಅಧ್ಯಯನದಲ್ಲಿ ಬಯಲಾಯ್ತು ಶಾಕಿಂಗ್​ ಮಾಹಿತಿ…..!

ಕೊರೊನಾ ನಿಯಂತ್ರಣ ಮಾಡುವ ಸಲುವಾಗಿ ದೇಶದಲ್ಲಿ 2020ರಲ್ಲಿ ಜಾರಿ ಮಾಡಲಾಗಿದ್ದ ಲಾಕ್​ಡೌನ್​ ಆದೇಶದಿಂದ ಮಹಿಳೆಯರ ಮೇಲೆ ಋಣಾತ್ಮಕ ಪರಿಣಾಮ ಬೀರಿದೆ ಎಂಬ ಆಘಾತಕಾರಿ ವಿಚಾರ ಅಧ್ಯಯನವೊಂದರ ಮೂಲಕ ಬೆಳಕಿಗೆ ಬಂದಿದೆ. ಅಮೆರಿಕದ ತಜ್ಞರ ಗುಂಪು ನಡೆಸಿದ ಅಧ್ಯಯನದ ಪ್ರಕಾರ ಲಾಕ್​ಡೌನ್​ ಆದೇಶದಿಂದಾಗಿ ಮಹಿಳೆಯ ಪೌಷ್ಠಿಕಾಂಶದ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ ಎನ್ನಲಾಗಿದೆ.

ಟಾಟಾ ಕಾರ್ನಲ್​ ಸಂಸ್ಥೆಯು ನಡೆಸಿದ ಅಧ್ಯಯನದಲ್ಲಿ ಆರ್ಥಿಕವಾಗಿ ಹಿಂದುಳಿದ ಉತ್ತರ ಪ್ರದೇಶದ ಮಹಾರಾಜಗಂಜ್​, ಬಿಹಾರದ ಮುಂಗೆರ್​, ಓಡಿಶಾದ ಕಂಧಮಲ್​ ಹಾಗೂ ಕಲಾಹಂಡಿಯಲ್ಲಿ ಮೇ 2019ಕ್ಕೆ ಹೋಲಿಕೆ ಮಾಡಿದರೆ ಮೇ 2020ರಲ್ಲಿ ಆಹಾರ ಧಾನ್ಯಗಳ ಖರೀದಿಯಲ್ಲಿ ಕಡಿಮೆ ಹಣ ವ್ಯಯ ಮಾಡಲಾಗಿದ್ದು ಇದರಿಂದಾಗಿ ಮಹಿಳೆಯರ ಪೌಷ್ಠಿಕಾಂಶ ಮಟ್ಟದಲ್ಲಿ ಕುಸಿತ ಕಂಡುಬಂದಿದೆ ಎನ್ನಲಾಗಿದೆ.

ಪಿಡಿಎಸ್​​ ಮೂಲಕ ಅಂಗನವಾಡಿಗಳಲ್ಲಿ, ನೇರ ಲಾಭ ಹಾಗೂ ಪಡಿತರ ಕೇಂದ್ರಗಳಲ್ಲಿ ಕ್ರಮವಾಗಿ 80 & 50 ಹಾಗೂ 30ಪ್ರತಿಶತದಷ್ಟು ಕುಟುಂಬಗಳಿಗೆ ಲಾಭ ಸಿಕ್ಕಿದ್ದರೂ ಸಹ ಈ ಫಲಿತಾಂಶ ಕಂಡುಬಂದಿದೆ ಎಂದು ಎಕನಾಮಿಯಾ ಪೊಲಿಟಿಕಾ ಜರ್ನಲ್​ನಲ್ಲಿ ವರದಿ ಪ್ರಕಟವಾಗಿದೆ.

ಕೊರೊನಾ ಆರಂಭಕ್ಕೂ ಮುನ್ನವೇ ಮಹಿಳೆಯರ ಆಹಾರ ಕ್ರಮದಲ್ಲಿ ಕೊರತೆ ಇತ್ತು. ಆದರೆ ಕೋವಿಡ್​ ನಿಂದಾಗಿ ಈ ಕೊರತೆಯು ಇನ್ನಷ್ಟು ಉಲ್ಬಣವಾಗಿದೆ ಎಂದು ಟಿಸಿಐಯ ಸಂಶೋಧನಾ ಅರ್ಥಶಾಸ್ತ್ರಜ್ಞೆ ಸೌಮ್ಯ ಗುಪ್ತಾ ಹೇಳಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...